ನಿರ್ದೇಶಕ ದಯಾಳ್ ಪದ್ಮನಾಭನ್ ಕಳೆದ ಒಂಭತ್ತು ತಿಂಗಳಲ್ಲಿ ಮೂರು ಸಿನಿಮಾಗಳನ್ನು ರೂಪಿಸಿ ತೆರೆಗೆ ತಂದಿದ್ದಾರೆ. ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ರಂಗನಾಯಕಿ ಹೆಸರಿನ ಈ ಚಿತ್ರವೀಗ ಟೈಟಲ್ ಲಾಂಚ್ ಮೂಲಕ ಆರಂಭವಾಗಿದ್ದು, ಇದೇ ತಿಂಗಳ 29ರಿಂದ ಚಿತ್ರೀಕರಣ ಶುರುವಾಗಲಿದೆ.
ಧೈರ್ಯಂ ಸಿನಿಮಾದ ಮೂಲಕ ಸಿನಿಮಾ ನಾಯಕನಟಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಭಯಾ ಪ್ರಕರಣ ನಡೆದ ನಂತರ ದಯಾಳ್ ಒಂದು ಕಾದಂಬರಿಯನ್ನು ಬರೆಯಲು ಆರಂಭಿಸಿದ್ದರಂತೆ. ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ತಾವು ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ರಚಿಸಿದ್ದರಂತೆ. ಇದನ್ನು ದಯಾಳ್ ಅವರ ಅಸೋಸಿಯೇಟ್ಸ್ ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.
Advertisement
Advertisement
ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.
Advertisement
“ರಂಗನಾಯಕಿ ಹೆಸರು ಕೇಳಿದರೇನೇ ರೋಮಾಂಚನಗೊಳ್ಳುತ್ತದೆ. ನಾನು ನನ್ನ ಐದನೇ ವಯಸ್ಸಿನಲ್ಲಿ ನನ್ನ ತಂದೆ ತಾಯಿಯೊಂದಿಗೆ ಪುಟ್ಟಣ್ಣ ಕಣಗಾಲರ ರಂಗನಾಯಕಿಯನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ಈಗ ಅದೇ ಹೆಸರಿನ ಸಿನಿಮಾದ ಆರಂಭೋತ್ಸವಕ್ಕೆ ನಾನು ಅತಿಥಿಯಾಗಿ ಬಂದಿರೋದು ಖುಷಿ ಎನಿಸುತ್ತಿದೆ. ಹೆಣ್ಣುಮಕ್ಕಳ ಪರವಾದ ಸಾಮಾಜಿಕ ಸಂದೇಶ ಈ ಸಿನಿಮಾದ ಮೂಲಕ ಜಗತ್ತಿಗೆ ರವಾನೆಯಾಗಲಿ” ಎಂದು ರೂಪಾ ಹೇಳಿದರು.
Advertisement
ನಾಯಕಿ ಅದಿತಿ ಮಾತನಾಡಿ, ಅತ್ಯಾಚಾರದಂತಹ ಅಮಾನವೀಯ ಪ್ರಕರಣಗಳಾದಾಗ ಅದರ ಸುದ್ದಿಗಳನ್ನು ನೋಡಿ ಮನಸ್ಸು ಹಿಂಡುತ್ತದೆ. ಆದರೆ ಈ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಪಾತ್ರದಲ್ಲಿ ನಟಿಸಲಿದ್ದೇನೆ. ಇದು ನಿಜಕ್ಕೂ ಛಾಲೆಂಜಿಂಗ್ ಆದ ಪಾತ್ರ ಎಂದರು.
ಇನ್ನು ಈ ಸಿನಿಮಾದಲ್ಲಿ ನಿರ್ದೇಶಕ ಶ್ರೀನಿ, ತ್ರಿವಿಕ್ರಮ್, ಲಾಸ್ಯಾ, ಶಿವಮಣಿ ಸೇರಿದಂತೆ ಸಾಕಷ್ಟು ಜನ ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಈ ಸಿನಿಮಾವನ್ನು ಈ ಹಿಂದೆ ಎಟಿಎಮ್ ಸಿನಿಮಾ ನಿರ್ಮಿಸಿದ್ದ ಎಸ್.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ.