ಬೆಂಗಳೂರು: ಕಿರುತೆರೆಯಲ್ಲಿ ನಾಗಕನ್ನಿಕೆ ಎಂಬ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದ ಅದಿತಿ ಪ್ರಭುದೇವ ಇದೀಗ ರಂಗನಾಯಕಿಯಾಗಿದ್ದಾರೆ. ಸಿನಿಮಾಗಳ ಸಂಖ್ಯೆಗಿಂತಲೂ ತಾನು ನಟಿಸೋ ಒಂದೊಂದು ಪಾತ್ರಗಳೂ ಕೂಡಾ ಜನರ ಮನಸಲ್ಲುಳಿಯಬೇಕೆಂಬ ತುಡಿತ ಹೊಂದಿರುವ ಅಪ್ಪಟ ನಟಿ ಅದಿತಿ. ಅವರ ಹಂಬಲಕ್ಕೆ ತಕ್ಕುದಾಗಿಯೇ ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರದ ಅವಕಾಶ ಅವರನ್ನು ಅರಸಿ ಬಂದಿತ್ತು. ಅಷ್ಟಕ್ಕೂ ಈ ಸವಾಲಿನಂಥಾ ಪಾತ್ರವನ್ನು ನಿರ್ವಹಿಸೋ ಅವಕಾಶ ಅದಿತಿ ಪಾಲಿಗೆ ಕೂಡಿ ಬಂದಿದ್ದೇ ಅವರ ಪ್ರತಿಭೆಯ ಕಾರಣದಿಣಂದ.
Advertisement
ನಿರ್ದೇಶಕ ದಯಾಳ್ ಪದ್ಮನಾಭನ್ ಒಂದು ಘಟನೆಯಿಂದ ಪ್ರೇರಿತರಾಗಿ ವರ್ಷಗಟ್ಟಲ್ಲೇ ಅದನ್ನೇ ಧ್ಯಾನಿಸುತ್ತಾ ಕಡೆಗೂ ಪರಿಪೂರ್ಣವಾದ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆದರೆ ಆ ಬಳಿಕ ಪಾತ್ರ ವರ್ಗದ ಆಯ್ಕೆಯ ವಿಚಾರ ಬಂದಾಗ ಅವರನ್ನು ಬಹುವಾಗಿ ಕಾಡಿದ್ದದ್ದು ರಂಗನಾಯಕಿಯ ಪಾತ್ರ. ಅದನ್ನು ನಿರ್ವಹಿಸೋದೆಂದರೆ ಸುಲಭದ ಮಾತಲ್ಲ. ಮಾಮೂಲಿ ಜಾಡಿನಲ್ಲಿಯೇ ಆಸಕ್ತಿ ಹೊಂದಿರುವ ನಟಿಯರು ಅದನ್ನು ನಿರ್ವಹಿಸಲು ಸಾಧ್ಯವಾಗೋದೂ ಇಲ್ಲ. ಸಾಕಷ್ಟು ಸಮಯವನ್ನು ದಯಾಳ್ ಈ ಹುಡುಕಾಟಕ್ಕೆಂದೇ ಮೀಸಲಿಟ್ಟಿದ್ದರಂತೆ. ಕಡೆಗೂ ಅವರು ರಂಗನಾಯಕಿಯಾಗಲು ಅದಿತಿ ಪ್ರಭುದೆವ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು.
Advertisement
Advertisement
ನಂತರ ಮಾತುಕತೆಯಾಗಿ ದಯಾಳ್ ರಂಗನಾಯಕಿಯ ಕಥೆ ಹೇಳಿ ಮುಗಿಸುವ ಹೊತ್ತಿಗೆಲ್ಲ ಅದಿತಿ ಭಾವಿಕರಾಗಿದ್ದರಂತೆ. ಅದು ಅವರು ಸದಾ ಕಾಲ ಬಯಸುತ್ತಾ ಬಂದಿದ್ದ ಭಿನ್ನವಾದ ಪಾತ್ರ. ಆದರೆ ಆ ಪಾತ್ರದ ಭಾವ ತೀವ್ರತೆಯನ್ನು ಕಂಡ ಅದಿತಿಗೆ ಈ ಪಾತ್ರವನ್ನು ಸಂಭಾಳಿಸಲು ತನ್ನಿಂದ ಸಾಧ್ಯವಾಗುತ್ತಾ ಅಂತೊಂದು ಅಳುಕು ಕಾಡಿತ್ತಂತೆ. ಯಾಕೆಂದರೆ, ಅದು ಎಲ್ಲ ಭಾವಗಳನ್ನೂ ಆವಾಹಿಸಿಕೊಂಡು ನಟಿಸ ಬೇಕಿದ್ದ ಪಾತ್ರ. ಅತ್ಯಾಚಾರಕ್ಕೀಡಾದ ಹುಡುಗಿಯೊಬ್ಬಳ ತಲ್ಲಣಗಳನ್ನು ಆವಾಹಿಸಕೊಂಡು ಅದಿತಿ ನಟಿಸಿದ ಪರಿ ಕಂಡು ಇಡೀ ಚಿತ್ರತಂಡವೇ ಅಚ್ಚರಿಗೊಂಡಿದೆ. ಅದು ಇದೇ ನವೆಂಬರ್ ಎಂಟರಿಂದ ಪ್ರತೀ ಪ್ರೇಕ್ಷಕರ ಕಣ್ಣುಗಳಲ್ಲಿಯೂ ಪ್ರತಿಫಲಿಸಲಿದೆ.