ಅಬುಧಾಬಿ: ಪಾಕಿಸ್ತಾನದ ಗೆಲುವಿಗೆ ಬೇಕಾಗಿದ್ದದ್ದು 138 ರನ್. ಆದರೆ 114 ರನ್ ಗಳಿಸುವಷ್ಟರಲ್ಲೇ ಪಾಕಿಸ್ತಾನದ ಎಲ್ಲಾ ಆಟಗಾರರು ಪೆವಿಲಿಯನ್ ಸೇರಿಯಾಗಿತ್ತು. ಈ ಮೂಲಕ ಶ್ರೀಲಂಕಾ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 21 ರನ್ ಗಳಿಂದ ಗೆದ್ದಿದೆ.
Advertisement
ಸಿಂಹಳೀಯರ ಈ ಗೆಲುವಿನ ಪ್ರಮುಖ ರೂವಾರಿ ಎಡಗೈ ಆಫ್ ಸ್ಪಿನ್ನರ್ ರಂಗನಾ ಹೆರಾತ್. ಪಾಕಿಸ್ತಾನದ 2ನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತ ಹೆರಾತ್ ಈ ಟೆಸ್ಟ್ ನಲ್ಲಿ ಒಟ್ಟು 11 ವಿಕೆಟ್ ಕಬಳಿಸಿದರು. ಈ ಮೂಲಕ ಪಾಕಿಸ್ತಾನಕ್ಕೆ ಹೆರಾತ್ ಸಿಂಹಸ್ವಪ್ನವಾಗಿ ಕಾಡಿದ್ದಾರೆ.
Advertisement
Advertisement
ಇದುವರೆಗೆ ಪಾಕಿಸ್ತಾನದ ವಿರುದ್ಧ 20 ಟೆಸ್ಟ್ ಆಡಿರುವ ಹೆರಾತ್ ಇಂದಿನ ಪಂದ್ಯದ 11 ವಿಕೆಟ್ ಸೇರಿ ಒಟ್ಟು 100 ವಿಕೆಟ್ ಪಡೆದಿದ್ದಾರೆ. ಅಂದ್ರೆ ಸರಾಸರಿ ಒಂದು ಟೆಸ್ಟ್ ನಲ್ಲಿ ಹೆರಾತ್ 5 ವಿಕೆಟ್ ಪಡೆದಂತಾಗಿದೆ.
Advertisement
ಹೆರಾತ್ ಇಂದಿನ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ 400 ವಿಕೆಟ್ ಗಳಿಸಿದ ಮೊದಲ ಎಡಗೈ ಆಫ್ ಸ್ಪಿನ್ನರ್ ಎಂಬ ಖ್ಯಾತಿಗೂ ಪಾತ್ರವಾಗಿದ್ದಾರೆ. ಅಲ್ಲದೆ 400 ವಿಕೆಟ್ ಗಳಿಸಿದ ವಿಶ್ವದ 14ನೇ ಬೌಲರ್ ಎಂಬ ಶ್ರೇಯಸ್ಸು ಕೂಡಾ ಹೆರಾತ್ ಪಾಲಾಗಿದೆ. ಜೊತೆಗೆ 400 ವಿಕೆಟ್ ಗಳಿಸಿದ ವಿಶ್ವದ 5ನೇ ಸ್ಪಿನ್ನರ್ ಎನಿಸಿಕೊಂಡರು. ಈ ಹಿಂದೆ ಆಸ್ಟ್ರೇಲಿಯಾದ ಶೇನ್ ವಾರ್ನ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಭಾರತೀಯರಾದ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ 400 ವಿಕೆಟ್ ಪಡೆದಿದ್ದರು.
ರಂಗನಾ ಹೆರಾತ್ 9 ಬಾರಿ 10 ವಿಕೆಟ್ ಹಾಗೂ 33 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.