ಚಂಡೀಗಢ: ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಹಾಭಾರತದಲ್ಲಿ ವಸ್ತ್ರಾಪಹರಣ ದೃಶ್ಯವನ್ನು ಉದಾಹರಣೆಗೆ ತೆಗೆದುಕೊಳ್ಳಲು ಹೋಗಿ ದ್ರೌಪದಿ ಬದಲಿಗೆ ಸೀತಾದೇವಿಯ ಹೆಸರು ಹೇಳಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ಸಂಸ್ಥೆಗಳು, ಇಡಿ, ಸಿಬಿಐ ಮತ್ತು ಆದಾಯ ತೆರಿಗೆಯಂತಹ ತನಿಖಾ ಸಂಸ್ಥೆಗಳು ಕೇಂದ್ರ ಅಪಖ್ಯಾತಿಗೊಳಿಸಿದೆ. ಕೇಂದ್ರವು ಎಲ್ಲಾ ಸಂಸ್ಥೆಗಳ ಮಹತ್ವವನ್ನು ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್, ಹೆಚ್ಚಿದ ಆತಂಕ
Advertisement
Randeep Surjewala : “सीता मैया” का हुआ था चीरहरण”
Even as a Muslim I know that Cheer Haran was not of Maa Sita but Draupadi! But then Congress denied existence of Shri Ram!
You can wear Janeu on the coat but what is inside you will always come out! #MannMeinRomeNotRam pic.twitter.com/pwBbwTAi7f
— Shehzad Jai Hind (@Shehzad_Ind) June 9, 2022
Advertisement
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಈ ಚುನಾವಣೆಯಲ್ಲಿ ಸತ್ಯ, ಪ್ರಜಾಪ್ರಭುತ್ವ, ಕಾನೂನು ಮತ್ತು ನೈತಿಕತೆ ಗೆಲ್ಲುತ್ತದೆ. ಸೀತಾದೇವಿಯ ವಸ್ತ್ರಾಪಹರಣದಂತೆ ಬಿಜೆಪಿ ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡಲು ಬಯಸುತ್ತದೆ. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಅವರ ಮುಖವಾಡ ಕಳೆದುಕೊಳ್ಳುತ್ತೆ ಎಂದು ಹೇಳಿದರು.
Advertisement
Advertisement
ಮಹಾಭಾರತದಲ್ಲಿ ರಾಜ ಧೃತರಾಷ್ಟ್ರನ ಆಸ್ಥಾನದಲ್ಲಿ ಪಂಚಪಾಂಡವರು ಸೇರಿದಂತೆ ಗಣ್ಯರ ಮುಂದೆ ಇಡೀ ಸಭೆಯಲ್ಲಿ ದ್ರೌಪದಿ ವಸ್ತ್ರಾಪಹರಣ ಮಾಡಲಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಲು ಹೋಗಿ ರಣದೀಪ್ ಅವರು ದ್ರೌಪದಿ ಬದಲಿಗೆ ಸೀತಾದೇವಿಯ ಹೆಸರು ಹೇಳಿದ್ದಾರೆ.
ಸುರ್ಜೆವಾಲಾ ಅವರ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ರಾಮನ ಅಸ್ತಿತ್ವವನ್ನು ನಿರಾಕರಿಸುತ್ತಿದೆ ಎಂದು ವ್ಯಂಗ್ಯವಾಡಿದೆ. ಅಲ್ಲದೇ ಹಲವು ಕಡೆಗಳಿಂದ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ: ಪ್ರಧಾನಿ