ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರು ಬಿಜೆಪಿ, ಭಜರಂಗದಳ, ಪಿಎಫ್‍ಐ ಹಾಗೂ ಸಿಎಫ್‍ಐ ಈ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.
Advertisement
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಒಬ್ಬ ಸಚಿವರ ಮೇಲೆ ಆಪಾದನೆ ಬಂದಿದೆ. 40% ಕಮಿಷನ್ ಪಡೆಯುತ್ತಿದ್ದಾರೆ ಅಂತ ಆರೋಪ ಬಂದಿದೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗದಷ್ಟು ಸಿಎಂ ವೀಕ್ ಆಗಿದ್ದಾರೆ. ಈಗ ಒಬ್ಬ ಬಿಜೆಪಿ ಕಾರ್ಯಕರ್ತ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾಕೆಂದರೆ ಅವರ ವಿರುದ್ಧ ಕಿರುಕುಳ ಹೆಚ್ಚಾಯ್ತು. ಹೀಗಾಗಿ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಕೇವಲ ಈಶ್ವರಪ್ಪನವರ ಮಾತ್ರ ವಜಾ ಮಾಡೋದಲ್ಲ ಮುಖ್ಯಮಂತ್ರಿಯೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Advertisement
Advertisement
ಈ ಸರ್ಕಾರದ ಎಲ್ಲಾ ಕಳಂಕಿತ ಸಚಿವರು ತೊಲಗಬೇಕು. ಭ್ರಷ್ಟ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರ ಹೊಸ ಡೆಸಿಬಲ್ ಲೆವೆಪ್ ಸೆಟ್ ಮಾಡುತ್ತಿದೆ. ನಿತ್ಯ ಸಿಎಂ ಬೊಮ್ಮಾಯಿ ಕೋಮು ವಿಚಾರಗಳ ಹಿಂದೆ ಅಡಗಿ ಕುಳಿತುಕೊಳ್ತಿದ್ದಾರೆ. ಸಿಎಂ ಅವರು ಬಿಜೆಪಿ, ಭಜರಂಗದಳ ಮೂರೂ ಸಹ ಪಿಎಫ್‍ಐ, ಸಿಎಫ್‍ಐ ಜೊತೆ ಕೈ ಜೋಡಿಸಿ ಈ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿದೆ. ಶೇ. 50 ರಷ್ಟು ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಕೆಲವರು ಬೇಲ್ ಮೇಲಿದ್ದಾರೆ, ಇನ್ನೂ ಕೆಲವರು ಬೇಲ್ ನ ನಿರೀಕ್ಷೆಯಲ್ಲಿದ್ದಾರೆ. ಅವರೆಲ್ಲರನ್ನೂ ವಜಾ ಮಾಡಬೇಕು, ಇಲ್ಲದಿದ್ದರೆ ಸಿಎಂ ಬೊಮ್ಮಾಯಿ ರಾಜೀನಾಮೆ ಕೊಟ್ಟು ಹೋಗಬೇಕು ಎಂದಿದ್ದಾರೆ. ಇದನ್ನೂ ಓದಿ: ಓಲೈಕೆ ರಾಜಕಾರಣ ಗೊತ್ತಿಲ್ಲ: ಇಬ್ಬರು ಮಾಜಿ ಸಿಎಂಗಳಿಗೆ ಕುಟುಕಿದ ಬೊಮ್ಮಾಯಿ