ಚಿಕ್ಕೋಡಿ: ಅಶ್ವಥ್ ನಾರಾಯಣ್ (Ashwath Narayan) ಅವರ ಮಾತುಗಳನ್ನು ಆಡಿಸುವವರು ಬೊಮ್ಮಾಯಿ, ಕಟೀಲ್, ಜೆ.ಪಿ ನಡ್ಡಾ (JP Nadda) ಹಾಗೂ ಮೋದಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಆರೋಪಿಸಿದರು.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕೊಲೆ ಮಾಡಿ ಅಂತ ಬಹಿರಂಗವಾಗಿ ಹೇಳುತ್ತಾರೆ. ಈ ರೀತಿಯ ಹಿಂಸೆಯ ರಾಜಕಾರಣ ಬಳಸಿ ಕಾಂಗ್ರೆಸ್ ಮೇಲೆ ದಾಳಿ ಮಾಡಲಾಗಿದೆ. ನೆನಪಿಸಿಕೊಳ್ಳಿ ಗೊಡ್ಸೆ ವಿಚಾರಧಾರೆ ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿತು. ಇದೇ ಹಿಂಸೆಯ ರಾಜಕಾರಣದಿಂದ ಇಂದಿರಾ ಹಾಗೂ ರಾಜೀವ್ ಗಾಂಧಿಯವರ ಕೊಲೆ ಆಯಿತು. ಈಗ ಸಿದ್ದರಾಮಯ್ಯ ಹತ್ಯೆ ಮಾಡಲು ಬಯಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ
ಸೋಮವಾರ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸತೀಶ್ ಜಾರಕಿಹೋಳಿಯವರನ್ನು ಕೊಲೆ ಮಾಡಲು ಹೇಳುತ್ತಾರೆ. ಇವರು ಸಾವಿರಾರು ಕಾಂಗ್ರೆಸ್ ಪ್ರತಿಭಟನೆಗಳ ಹತ್ಯೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ರೈತರ ಮಾತುಗಳು ಆಡುವುದು ಇವರಿಗೆ ಬೇಡ. ಕಾಂಗ್ರೆಸ್ ಹಿಂದುಳಿದವರ ಬಗ್ಗೆ ಮಾತನಾಡುವುದು ಇವರಿಗೆ ಬೇಡವಾಗಿದೆ. ಎಷ್ಟು ಜನರನ್ನು ಕೊಲ್ಲುವವರು ಒಬ್ಬರನ್ನು ಕೊಂದರೆ ಇನ್ನೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮುಂದೆ ಬರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k