ನವದೆಹಲಿ: ಚುನಾವಣೆಯಲ್ಲಿ ಸ್ಥಾನಗಳು ಸಿಗದಿದ್ದರೂ ಕಾಂಗ್ರೆಸ್ ಪ್ರತಿ ಬೀದಿ ಮತ್ತು ಪ್ರದೇಶವನ್ನು ತಲುಪಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮವಾಗಿ ಸ್ಪರ್ಧಿಸಿದೆ. ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಹೇಳಿದ್ದಾರೆ.
ಪಂಜಾಬ್‍ನಲ್ಲಿ ಮಣ್ಣಿನ ಮಗ ಚರಂಜಿತ್ ಸಿಂಗ್ ಚನ್ನಿಯನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೆವು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ನಾಲ್ಕೂವರೆ ವರ್ಷಗಳ ಸಂಪೂರ್ಣ ಆಡಳಿತ ವಿರುದ್ಧ ಸೃಷ್ಟಿಯಾದ ಅಲೆಯನ್ನು ಮೆಟ್ಟಿನಿಲ್ಲಲು ಸಾಧ್ಯವಾಗಲಿಲ್ಲ. ಜನರು ಬದಲಾವಣೆಗಾಗಿ ಎಎಪಿಗೆ ಮತ ಹಾಕಿದರು ಎಂದಿದ್ದಾರೆ. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್
Advertisement
Advertisement
ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ನಿರಾಸೆಯಾಗಿದೆ. ಚುನಾವಣೆಯಲ್ಲಿ ಸೋತಿದ್ದೇವೆ ಆದರೆ ಧೈರ್ಯ ಕುಂದಿಲ್ಲ. ಪಕ್ಷವು ಜನರ ಸಮಸ್ಯೆಗಳ ವಿರುದ್ದದ ಹೋರಾಟವನ್ನು ಮುಂದುವರಿಸುತ್ತದೆ. ಚುನಾವಣೆಯಲ್ಲಿ ಗೆದ್ದ ಪಕ್ಷಗಳಿಗೆ ಅಭಿನಂದನೆ ಎಂದು ಹೇಳಿದ್ದಾರೆ.
Advertisement
In Punjab, Congres presented a new leadership through Charanjit Singh Channi who is son of the soil, but the entire anti-incumbency of 4.5 years under Captain Amarinder Singh could not be overcome and hence people voted for AAP for change: Congress leader Randeep Singh Surjewala pic.twitter.com/j2waxOqvxo
— ANI (@ANI) March 10, 2022
Advertisement
ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ನಿರೀಕ್ಷೆಗೆ ವಿರುದ್ಧವಾಗಿವೆ. ನಾವು ಗೋವಾ, ಉತ್ತರಾಖಂಡ ಮತ್ತು ಪಂಜಾಬ್‍ನಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಿದ್ದೇವೆ. ನಾವು ಜನರ ಆಶೀರ್ವಾದ ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಚರಂಜಿತ್ ಸಿಂಗ್ ಚನ್ನಿ ರೂಪದಲ್ಲಿ ನಾವು ಸಭ್ಯ, ಉತ್ತಮ ನಾಯಕನನ್ನು ನೀಡಲು ಪ್ರಯತ್ನಿಸಿದ್ದೇವೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಆಳ್ವಿಕೆಯಲ್ಲಿ ಬೆಳೆದ ನಾಲ್ಕೂವರೆ ವರ್ಷಗಳ ಆಡಳಿತ ವಿರೋಧಿ ವಿರುದ್ಧ ಹೋರಾಡಲು ನಮಗೆ ಸಾಧ್ಯವಾಗಲಿಲ್ಲ. ನಾವು ತೀರ್ಪನ್ನು ಸ್ವೀಕರಿಸುತ್ತೇವೆ ಎಂದಿದ್ದಾರೆ.