ರಾಂಚಿ: ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸ್ಥಳೀಯ ಯವಕರು ಹಲ್ಲೆ ಮಾಡಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ಸೋಮವಾರ ನಡೆದಿದ್ದು, ಘಟನೆಯಲ್ಲಿ ಕಲಾಂತಸ್ ಬಾರ್ಲಾ ಸಾವನ್ನಪ್ಪಿದ್ದಾನೆ. ಫಾಗು ಕಚಪಾಂಡ್ ಮತ್ತು ಫಿಲಿಪ್ ಹಹೋರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರನ್ನು ಬುಡಕಟ್ಟು ಕ್ರಿಶ್ಚಿಯನ್ನರು ಎಂದು ಗುರುತಿಸಲಾಗಿದೆ.
Advertisement
Advertisement
ಖುಂಟಿ ಜಿಲ್ಲೆಯಾ ಜಲ್ತಾಂಡಾದ ಸುವಾರಿ ಎಂಬ ಗ್ರಾಮದಲ್ಲಿ ನಿಷೇಧಿತ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ವಾಟ್ಸಾಪ್‍ನಲ್ಲಿ ಸುದ್ದಿ ಆಗಿದೆ. ಈ ಸುದ್ದಿಯನ್ನೇ ಬೆನ್ನಟ್ಟಿದ ಸುತ್ತಮುತ್ತಲ ಊರಿನ ಯುವಕರ ಗುಂಪು ಈ ಮೂವರ ಮೇಲೆ ಹಲ್ಲೆ ಮಾಡಿದೆ. ಇವರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಮೂವರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಮಗೆ ಹೆಚ್ಚು ಮಾಹಿತಿಯಿಲ್ಲ. ಈಗಾಲೇ ತನಿಖೆ ಪ್ರಾರಂಭ ಮಾಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾರನ್ನೂ ಬಂಧಿಸಿಲ್ಲ. ಆದರೆ ಕೆಲ ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
Advertisement
ಕಳೆದ ಏಪ್ರಿಲ್ ಇದೇ ರೀತಿಯ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಗುಮ್ಲಾ ಜಿರ್ಮೋ ಗ್ರಾಮದ ಬುಡಕಟ್ಟು ಕ್ರಿಶ್ಚಿಯನ್ ಯುವಕ ಪ್ರಕಾಶ್ ಲಕ್ರಾ ಎಂಬವರನ್ನು ಸತ್ತ ಎತ್ತುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂದು ಹಲ್ಲೆ ನಡೆದು ಮೃತಪಟ್ಟಿದ್ದ.