ಬಾಲಿವುಡ್ ನಟರಾದ ರಣಬೀರ್ ಕಪೂರ್ ಹಾಗೂ ನಿರ್ದೇಶಕ ಕರಣ್ ಜೋಹರ್ (Karan Johar) ಮೇಲೆ ನಟಿ ಕಂಗನಾ ರಣಾವತ್ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ನಿನ್ನೆಯಷ್ಟೇ ರಣಬೀರ್ ಕಪೂರ್ ಅವರನ್ನು ಬಿಳಿ ಇಲಿಗೆ ಹೋಲಿಸಿದ್ದ ಕಂಗನಾ ಇವತ್ತು ಸುಶಾಂತ್ ಸಿಂಗ್ ಸಾವನ್ನು ಎಳೆತಂದಿದ್ದಾರೆ. ಸುಶಾಂತ್ (Sushant Singh) ಸಾವಿಗೆ ರಣಬೀರ್ ಕಪೂರ್ ಮತ್ತು ಕರಣ್ ಜೋಹರ್ ಕಾರಣವೆಂದು ಬರೆದುಕೊಂಡಿದ್ದಾರೆ. ಅಲ್ಲದೇ ರಣಬೀರ್ ಅವರನ್ನು ದುರ್ಯೋಧನನಿಗೆ ಕರಣ್ ಜೋಹರ್ ಅವರನ್ನು ಶಕುನಿ ಹೋಲಿಸಿದ್ದಾರೆ.
ನಿನ್ನೆಯಷ್ಟೇ ರಣಬೀರ್ ಕಪೂರ್, ಆಲಿಯಾ ಭಟ್ ನಟಿಸುತ್ತಾರೆ ಎನ್ನಲಾದ ರಾಮಾಯಣ ಸಿನಿಮಾ ಬಗ್ಗೆಯೂ ಕಂಗನಾ ಮಾತನಾಡಿದ್ದರು. ಬಾಲಿವುಡ್ ನಲ್ಲಿ ರಾಮಾಯಣ (Ramayana) ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ತಾರಾಗಣದ ಯಾದಿ ಮಾತ್ರ ಹೊರಗೆ ಬಿದ್ದಿದೆ.
ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ (Alia Bhatt) ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ನಿಜ ಜೀವನದಲ್ಲೂ ಸತಿ-ಪತಿಯಾಗಿರುವ ರಣಬೀರ್ ಮತ್ತು ಆಲಿಯಾ ಭಟ್ ತೆರೆಯ ಮೇಲೂ ಅಂಥಧ್ದೇ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ.
ಇದರ ಜೊತೆಗೆ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಟಾರ್ ಗಳ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದಾರೆ. ಅದರಲ್ಲೂ ಪರೋಕ್ಷವಾಗಿ ರಣಬೀರ್ ಕಪೂರ್ ಟೀಕಿಸಿದ್ದಾರೆ. ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲ ಕರೆದಿದ್ದಾರೆ. ಇದನ್ನೂ ಓದಿ:ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಣಾವತ್ (Kangana Ranaut), ‘ನಾನು ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ ಬಗ್ಗೆ ಕೇಳುತ್ತಿರುವೆ. ಅದರಲ್ಲಿ ಮಾದಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ. ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಪಿ.ಆರ್ ಮಾಡಿಕೊಂಡು ಓಡಾಡುವಲ್ಲಿ ಕುಖ್ಯಾತಿ ಪಡೆದವನು. ಇವನು ಕೇವಲ ನಟನಲ್ಲ, ಹೆಣ್ಣು ಬಾಕ ಕೂಡ. ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ’ ಎಂದು ಜರಿದಿದ್ದಾರೆ.
ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎಂದು ಕೇಳಿದ್ದೇನೆ. ರಾವಣ ಪಾತ್ರಕ್ಕಿಂತ ಅವರಿಗೆ ರಾಮನ ಪಾತ್ರ ಹೊಂದುತ್ತದೆ ಎಂದು ಪರೋಕ್ಷವಾಗಿ ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲ ಹೇಳಿಕೆಗಳ ನಡುವೆಯೂ ಅವರು ರಣಬೀರ್ ಕಪೂರ್ ಗೆ ಎಚ್ಚರಿಕೆಯನ್ನೂ ನೀಡಿದ್ದು, ‘ನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೇ ದೂರ ಇರು’ ಎಂದು ಬರೆದುಕೊಂಡಿದ್ದಾರೆ.