ಸ್ಟೈಲೀಶ್ ಆಗಿ ಕಾಣಿಸಿಕೊಂಡ ರಣಬೀರ್ ಕಪೂರ್- ‘ಧೂಮ್ 4’ ಬಗ್ಗೆ ಚರ್ಚೆ ಶುರು

Public TV
1 Min Read
ranbir

‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ರಣಬೀರ್ ಕಪೂರ್ ಬೇಡಿಕೆ ಹೆಚ್ಚಾಗಿದೆ. ‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ನಟಿಸುವುದರ ಜೊತೆಗೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಲು ಅವಕಾಶಗಳು ಅರಸಿ ಬರುತ್ತಿದೆ. ಈ ನಡುವೆ ಅವರ ಹೊಸ ಲುಕ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡಿದ್ದಾರೆ.

ranbir kapoor

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕಿಮ್ ಅವರು ರಣಬೀರ್ ಹೊಸ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ, ನಟ ‘ಧೂಮ್ 4’ (Dhoom 4) ಚಿತ್ರಕ್ಕಾಗಿ ಹೇರ್ ಸ್ಟೈಲ್ ಬದಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

View this post on Instagram

 

A post shared by Aalim Hakim (@aalimhakim)


ಇನ್ನೂ ‘ಧೂಮ್’ ಚಿತ್ರದ ಈ ಹಿಂದಿನ ಮೂರು ಸರಣಿಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ‘ಧೂಮ್ 4’ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಇನ್ನೂ ಈ ಚಿತ್ರದಲ್ಲಿ ರಣಬೀರ್ ನೆಗೆಟಿವ್ ಶೇಡ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ರಾಮಾಯಣ, ಧೂಮ್ 4, ಅನಿಮಲ್ ಪಾರ್ಕ್, ಕರಣ್ ಜೋಹರ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ರಣಬೀರ್ ಕೈಯಲ್ಲಿವೆ.

Share This Article