:ಬಾಲಿವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಸಿನಿಮಾ ಡಿಸೆಂಬರ್ 1ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ ಡಿಸೆಂಬರ್ ನನ್ನ ಲಕ್ಕಿ ತಿಂಗಳು ಎಂದು ನಟಿ ಖುಷಿಯಿಂದ ಮಾತನಾಡಿದ್ದಾರೆ. ಅನಿಮಲ್ ಸಿನಿಮಾದ ನನ್ನ ಪಾತ್ರವನ್ನು ತೆರೆಯ ಮೇಲೆ ನೋಡಲು ಕಾಯ್ತಿದ್ದೇನೆ ಎಂದಿದ್ದಾರೆ.
‘ಪುಷ್ಪ’ ನಟಿ ರಶ್ಮಿಕಾ ಮಂದಣ್ಣ- ರಣ್‌ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದ ಕೆಲಸ ಕೂಡ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿಸೆಂಬರ್ ನನ್ನ ಲಕ್ಕಿ ತಿಂಗಳು ಯಾಕೆ ಎಂಬುದನ್ನ ಮಾತನಾಡಿದ್ದಾರೆ. ನಾನು ನಟಿಸಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿಯಿಂದ(Kirik Party) ಪುಷ್ಪ (Pushpa) ಚಿತ್ರದವರೆಗೂ ಡಿಸೆಂಬರ್‌ನಲ್ಲಿ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಕಿರಿಕ್ ಪಾರ್ಟಿ, ಚಮಕ್, ಅಂಜನಿಪುತ್ರ, ಪುಷ್ಪ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಈಗ ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿರೋ ನನ್ನ 5ನೇ ಸಿನಿಮಾ ‘ಅನಿಮಲ್’ ಕೂಡ ನನ್ನ ಲಕ್ಕಿ ತಿಂಗಳಿನಲ್ಲಿ ರಿಲೀಸ್ ಆಗ್ತಿದೆ ಎಂದು ನಟಿ ಖುಷಿಯಿಂದ ಮಾತನಾಡಿದ್ದಾರೆ.
‘ಅನಿಮಲ್’ ಸಿನಿಮಾದಲ್ಲಿ ನನ್ನ ಪಾತ್ರ ಯೂನಿಕ್ ಆಗಿದೆ. ನಾನು ಎಂದೂ ಈ ತರಹದ ಪಾತ್ರದಲ್ಲಿ ನಟಿಸಿಲ್ಲ. ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ನಾನು ಕಾಯುತ್ತಿದ್ದೇನೆ. ಅದಷ್ಟು ಬೇಗ ಅನಿಮಲ್ ಸಿನಿಮಾ ತೆರೆಗೆ ಬರಲಿ ಎಂದು ನಾನು ಎದುರು ನೋಡ್ತಿದ್ದೇನೆ ಎಂದಿದ್ದಾರೆ. ಈ ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ. ಡಿಫರೆಂಟ್ ಕಥೆಯಾಗಿದ್ದು, ಅಭಿಮಾನಿಗಳು ನಿಜಕ್ಕೂ ಈ ಚಿತ್ರ ಇಷ್ಟಪಡುತ್ತಾರೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ಇದನ್ನೂ ಓದಿ:Singham 3: ಅಜಯ್ ದೇವಗನ್ ಸಹೋದರಿಯಾಗಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ
ಸದ್ಯ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲಿ ಮೊದಲ ಬಾರಿಗೆ ಜೋಡಿಯಾಗಿ ರಣ್‌ಬೀರ್- ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.