ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali)’ಹೀರಾಮಂಡಿ’ ಸಿನಿಮಾದ ನಂತರ ‘ಲವ್ & ವಾರ್’ (Love & War) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಡೆಡ್ಲಿ ಪ್ರೇಮ ಕಥೆ ಹೇಳೋದಕ್ಕೆ ನಿರ್ದೇಶಕ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಬ್ರಹ್ಮರಾಕ್ಷಸ’ನಿಗಾಗಿ ಐಟಂ ಸಾಂಗ್: ಸಂಜೆ ಹೊತ್ನಾಗ ಮೈಪುಳಕ
ರಣ್‌ಬೀರ್ ಕಪೂರ್, ಆಲಿಯಾ ಭಟ್ (Alia Bhatt) ಜೊತೆ ವಿಕ್ಕಿ ಕೌಶಲ್ ಒಂದೇ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ. ವಿಕ್ಕಿಗೆ ಜೋಡಿಯಾಗಿ ನಟಿಸುತ್ತಿರುವ ಆಲಿಯಾಗೆ ರಣ್‌ಬೀರ್ (Ranbir Kapoor) ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಇದೇ ಅಕ್ಟೋಬರ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಲಿದೆ.
ಈ ಹಿಂದೆ ಎಂದೂ ತೋರಿಸಿರದ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ಹೇಳೋಕೆ ಸಂಜಯ್ ಲೀಲಾ ಬನ್ಸಾಲಿ ಸಜ್ಜಾಗಿದ್ದಾರೆ. ಆಲಿಯಾ ಭಟ್, ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್ ಸುತ್ತ ಈ ಕಥೆ ಇರಲಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.