ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ಭಾರೀ ಸದ್ದು ಮಾಡಿದೆ. ಟ್ರೈಲರ್ ಗೆ ಅನ್ನು ಒಪ್ಪಿಕೊಂಡಂತೆಯೇ, ರಣಬೀರ್ ನಡೆಗೆ ವಿರೋಧವೂ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ರಣಬೀರ್ ಕಪೂರ್, ಶೂ ಧರಿಸಿಕೊಂಡು ಗಂಟೆ ಬಾರಿಸಿದರು ಎನ್ನುವ ಕಾರಣಕ್ಕಾಗಿ ಹಿಂದೂಗಳು ಟ್ರೈಲರ್ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ಕುರಿತು ನಿರ್ದೇಶಕ ಅಯಾನ್ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ತಪ್ಪು ಆಗಿಲ್ಲವೆಂದು ಹೇಳಿಕೆ ನೀಡಿದ್ದಾರೆ.
ರಣಬೀರ್ ಓಡಿ ಬಂದು ಗಂಟೆ ಬಾರಿಸುವುದು ದೇವಸ್ಥಾನದ ಒಳಗೆ ಅಲ್ಲ, ಅದು ದುರ್ಗಾ ಮಾತೆಯ ಮಂದಿರ. ನನ್ನ ಕುಟುಂಬದ ಜೊತೆ ನಾನು ಬಾಲ್ಯದಿಂದಲೂ ದುರ್ಗಾ ಪೂಜೆಗೆ ಹೋಗುತ್ತಾನೆ. ದೇವಿ ಬಳಿ ಹೋಗುವಾಗ ನಾವು ಚಪ್ಪಲಿ ತೆಗೆದಿಡುತ್ತೇವೆ. ಮಂಟಪದೊಳಗಡೆ ಹೋಗುವಾಗ ಅಲ್ಲ. ಹಾಗಾಗಿ ಅದು ತಪ್ಪಾಗಿ ಕಾಣಿಸಿಕೊಂಡಿದೆ. ಯಾರಿಗೆಲ್ಲ ಬೇಸರವಾಗಿದೆಯೋ ಅವರಿಗೆ ಸತ್ಯ ತಿಳಿಸುವುದು ನನ್ನ ಜವಾಬ್ದಾರಿ ಆಗಿರುವುದರಿಂದ ಈ ಸ್ಪಷ್ಟನೆ ಕೊಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?
ಈ ಸಿನಿಮಾದಲ್ಲಿ ನಮ್ಮ ಸಂಸ್ಕೃತಿಯನ್ನು, ಕಲೆ, ಆಚರಣೆಯನ್ನು ಬಿಂಬಿಸುವಂತಹ ಪ್ರಯತ್ನ ಮಾಡಿದ್ದೇನೆ. ನಮಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರ ಬಗ್ಗೆ ತುಂಬಾ ಗೌರವವಿದೆ. ಹಾಗಾಗಿ ನಾವು ಯಾರಿಗೂ ನೋವನ್ನು ಮಾಡುವಂತಹ ದೃಶ್ಯಗಳನ್ನು ಈ ಸಿನಿಮಾದಲ್ಲಿ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ನಿಮಗೆ ಆ ದೃಶ್ಯದ ಬಗ್ಗೆ ಮನವರಿಕೆ ಆಗುತ್ತದೆ ಎಂದೂ ಅವರು ತಿಳಿಸಿದ್ದಾರೆ.