`ಬ್ರಹ್ಮಾಸ್ತ್ರ’ (Bramastra Film) ಚಿತ್ರದ ನಂತರ ರಣ್ಬೀರ್ ಕಪೂರ್(Ranbir Kapoor) ಸಿನಿಮಾದಿಂದ ದೂರ ಸರಿದಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ಪತ್ನಿ ಆಲಿಯಾ ಭಟ್ (Alia Bhatt) ಅವರ ಸೀಮಂತ ಶಾಸ್ತ್ರದ ನಂತರ ಸಿನಿಮಾಗಳಿಗೆ ರಣ್ಬೀರ್ ಬ್ರೇಕ್ ಹಾಕಿದ್ದಾರೆ.
View this post on Instagram
ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಕಪೂರ್ ಕುಟುಂಬ(Kapoor Family), ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ʻಬ್ರಹ್ಮಾಸ್ತ್ರʼ ಚಿತ್ರದ ನಂತರ ರಣ್ಬೀರ್ ಖಡಕ್ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯದ ಮಟ್ಟಿಗೆ ನಟನೆಯಿಂದ ದೂರ ಸರಿಯಲು ಯೋಚಿಸಿದ್ದಾರೆ.
View this post on Instagram
ಪತ್ನಿ ಆಲಿಯಾ ಭಟ್ ಅವರ ಸೀಮಂತ ಶಾಸ್ತ್ರ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತ್ತು. ತುಂಬು ಗರ್ಭಿಣಿಯಾಗಿರುವ ಆಲಿಯಾಗೆ ಇದೀಗ ಪ್ರೀತಿ ಪಾತ್ರರು ಹತ್ತಿರವಿರುವ ಅವಶ್ಯಕತೆಯಿದೆ. ಹಾಗಾಗಿ ನಟನೆಗೆ ಕೊಂಚ ಬ್ರೇಕ್ ಹಾಕಿ, ಪತ್ನಿಯ ಆರೈಕೆಯಲ್ಲಿ ರಣ್ಬೀರ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಪ್ರಾಜೆಕ್ಟ್ಗಳನ್ನ ರಣ್ಬೀರ್ ಇದೀಗ ಕಂಪ್ಲೀಟ್ ಮಾಡಿ ಕೊಡುತ್ತಿದ್ದಾರೆ. ಇದನ್ನೂ ಓದಿ:ರಿಷಬ್ ನಟನೆಯ `ಕಾಂತಾರ’ ಸಿನಿಮಾ ನೋಡಿ ಕಿಚ್ಚನ ರಿಯಾಕ್ಷನ್
ಮುದ್ದು ಮಗುವಿನ ಆಗಮನದ ನಂತರ ಆಲಿಯಾ ಚೇತರಿಸಿಕೊಂಡ ಮೇಲೆ ಮತ್ತೆ ರಣ್ಬೀರ್ ಕಪೂರ್ ನಟನೆಯತ್ತ ಮುಖ ಮಾಡಲಿದ್ದಾರೆ.