ತನ್ನ ಕೆಟ್ಟ ಚಟದ ಬಗ್ಗೆ ರಣ್‍ಬೀರ್ ಓಪನ್ ಮಾತು

Public TV
1 Min Read
ranbir kapoor

ಮುಂಬೈ: ಬಾಲಿವುಡ್ ನಟ ರಣ್‍ಬೀರ್ ಕಪೂರ್ ‘ಸಂಜು’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿ ತನಗಿರುವ ಕೆಟ್ಟ ಚಟದ ಬಗ್ಗೆ ಹೇಳಿಕೊಂಡಿದ್ದಾರೆ.

ಹೆಲ್ತ್ ಆಂಡ್ ನ್ಯೂಟ್ರಿಶೀಯನ್ ಗೆ ನೀಡಿದ ಸಂದರ್ಶನದಲ್ಲಿ ರಣ್‍ಬೀರ್ ತಮ್ಮ ಹೆಲ್ತ್ ಹಾಗೂ ಫಿಟ್ನೆಸ್ ಬಗ್ಗೆ ಮಾತನಾಡಿದ್ದಾರೆ. ನಾನು ಫಿಟ್ ಇರುವುದ್ದನ್ನು ನನ್ನ ಅಮ್ಮನಿಂದ ಕಲಿತೆ. ಅವರು ನನಗೆ ಹಾಗೂ ನನ್ನ ಸಹೋದರಿಗೆ ಫಿಟ್ ಇರಲು ಪ್ರೇರೇಪಿಸುತ್ತಿದ್ದರು. ನಂತರ ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಹಾಗೂ ಜೀವನ ವಿಧಾನವನ್ನು ಬೆಳೆಸಿಕೊಂಡೆ ಎಂದರು.

ಸಿನಿಮಾಗೆ ತಕ್ಕಂತೆ ನನ್ನ ಫಿಟ್ನೆಸ್ ಬದಲಾಗುತ್ತಿರುತ್ತದೆ. ಕೆಲವೊಂದು ಸಿನಿಮಾಗೆ ನಾನು ಆ ಪಾತ್ರಕ್ಕೆ ತಕ್ಕಂತೆ ಸಣ್ಣ ಹಾಗೂ ದಪ್ಪ ಆಗುತ್ತಿರಬೇಕು. ಈ ಹಿಂದೆ ‘ಜಗ್ಗಾ ಜಾಸೂಸ್’ ಸಿನಿಮಾದಲ್ಲಿ ನಾನು ಸ್ಕೂಲ್ ಹುಡುಗನ ಪಾತ್ರವನ್ನು ನಿರ್ವಹಿಸಿದೆ. ಆ ಪಾತ್ರಕ್ಕಾಗಿ ನಾನು ತುಂಬಾ ಸಣ್ಣ ಆಗಬೇಕಿತ್ತು ಎಂದು ರಣ್‍ಬೀರ್ ವಿವರಿಸಿದರು.

ನನಗೆ ಮದ್ಯ ಕುಡಿಯುವ ಚಟ ಇದೆ. ಮದ್ಯ ಸೇವಿಸಿ ನನ್ನ ಕುಟುಂಬದವರ ಮೇಲಾದ ಪರಿಣಾಮವನ್ನು ನಾನು ನೋಡಿದ್ದೇನೆ. ಹಾಗಾಗಿ ನಾನು ಎಚ್ಚರದಿಂದ ಇರುತ್ತೇನೆ. ನಾನು ಶೂಟಿಂಗ್ ಹಾಗೂ ಕೆಲಸದಲ್ಲಿದ್ದಾಗ ಮಾತ್ರ ಮದ್ಯ ಸೇವಿಸಲ್ಲ ಎಂದು ಹೇಳಿದರು.

ನಾನು ಕುಡಿತಕ್ಕೆ ದಾಸನಾಗಿಲ್ಲ. ಆದರೆ ನಾನು ತುಂಬಾ ಮದ್ಯ ಸೇವಿಸುತ್ತೇನೆ. ನಾನು ಕುಡಿಯುವುದನ್ನು ಶುರು ಮಾಡಿದರೆ, ನಿಲ್ಲಿಸುವುದೇ ಇಲ್ಲ. ಬಹುಶಃ ಇದು ನನ್ನ ರಕ್ತದಲ್ಲೇ ಇದೆ ಎಂದು ಅನಿಸುತ್ತದೆ. ನನ್ನ ಕುಟುಂಬದ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ಕುಡಿಯುವ ಅಭ್ಯಾಸವಿದೆ ಎಂದು ರಣ್‍ಬೀರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *