ಬಾಲಿವುಡ್‌ನ ಯಂಗ್ ಕಪಲ್ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಸದ್ಯ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಗುಡ್ ನ್ಯೂಸ್ ಮಧ್ಯೆ ರಣ್‌ಬೀರ್ `ಶಂಷೇರಾ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಖಾಸಗಿ ವಿಚಾರದ ಬಗ್ಗೆ ಪ್ರಶ್ನೆಗಳನ್ನ ಎದುರಿಸುತ್ತಿದ್ದಾರೆ. ಮುಂಬರುವ ಹೊಸ ಅತಿಥಿಗೆ ಯಾವ ಹೆಸರನ್ನು ಇಡುತ್ತಾರೆ ಎಂಬ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.
ಹಿಂದಿ ಚಿತ್ರರಂಗದ ಬೆಸ್ಟ್ ಕಪಲ್ ರಣ್‌ಬೀರ್ ಕಪೂರ್ ಸಂಜು ಸೂಪರ್ ಸಕ್ಸಸ್ ನಂತರ ಶಂಷೇರಾ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಅತಿಥಿಯ ಆಗಮನದ ಖುಷಿಯಲ್ಲಿರುವ ರಣ್‌ಬೀರ್‌ಗೆ ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಖಾಸಗಿ ಪ್ರಶ್ನೆಯೊಂದು ಕೇಳಲಾಗಿದೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್ ಕೊಟ್ರು ಬ್ರೇಕಿಂಗ್ ನ್ಯೂಸ್
Advertisement
ನಿಮ್ಮ ಕುಟುಂಬದ ಬಹುತೇಕ ಹೆಸರುಗಳು ಆರ್ ಅಕ್ಷರದಿಂದಲೇ ಶುರುವಾಗುತ್ತದೆ. ಹಾಗಾಗಿ ನಿಮ್ಮ ಮಗುವಿನ ಹೆಸರು ಆರ್ ಅಕ್ಷರದಿಂದ ಶುರುವಾಗುತ್ತಾ ಅಥವಾ ಬೇರೆ ಯಾವುದಾದರೂ ಹೆಸರನ್ನ ಯೋಚಿಸಿದ್ದೀರಾ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಣ್‌ಬೀರ್, ಆರ್ ಮತ್ತು ಆರ್ ಅಲ್ಲದ ಅಕ್ಷರದ ಹೆಸರನ್ನು ಈಗಾಗಲೇ ಯೋಚಿಸಿದ್ದೀವಿ. ನೀವು ಮೊದಲ ಬಾರಿಗೆ ಮಗುವನ್ನು ಹಿಡಿದಿಟ್ಟುಕೊಳ್ಳುವಾಗ ನಿಮ್ಮ ಮನಸ್ಸಿಗೆ ಸಹಜವಾಗಿ ಬರುವ ಹೆಸರು ಬಹಳ ವಿಶೇಷ ಕ್ಷಣವಾಗಿದೆ. ಮಗುವಿನ ಬರುವಿಕೆಗಾಗಿ ಕಾಯುತ್ತೀದ್ದೇವೆ. ಮಗುವಿನ ವ್ಯಕ್ತಿತ್ವದ ಅನುಗುಣವಾಗಿ ಹೆಸರನ್ನು ಇಡುತ್ತೇವೆ ಎಂದು ರಣ್‌ಬೀರ್ ಮಾತನಾಡಿದ್ದಾರೆ.
Advertisement
ಒಟ್ನಲ್ಲಿ ಕಪೂರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜ್ಯೂನಿಯರ್ ರಣ್‌ಬೀರ್ ಕಪೂರ್ ಬರೋದಕ್ಕೂ ಮುಂಚೆಯೇ ಹೆಸರಿನ ಹುಡುಕಾಟದಲ್ಲಿ ರಣ್‌ಬೀರ್ ಮತ್ತು ಆಲಿಯಾ ಜೋಡಿ.