ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣಗೆ(Rashmika Mandanna) ‘ಅನಿಮಲ್’ (Animal Film) ಚಿತ್ರ ಬಿಗ್ ಬ್ರೇಕ್ ಕೊಟ್ಟಿತ್ತು. ಇದರ ಪಾರ್ಟ್ 2 ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಡೈರೆಕ್ಟರ್ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ. ಅನಿಮಲ್ ಪಾರ್ಕ್ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಇದನ್ನೂ ಓದಿ:ಡಾ.ರಾಜ್ ಹುಟ್ಟುಹಬ್ಬ- ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ
‘ಅನಿಮಲ್ ಪಾರ್ಕ್’ (Animal) ಸಿನಿಮಾದ ಕಥೆ ಸಿದ್ಧವಾಗಿದೆ. ಹಾಗಾದ್ರೆ ಶೂಟಿಂಗ್ ಯಾವಾಗ? ಚಿತ್ರ ಹೇಗಿರಲಿದೆ ಎಂಬುದನ್ನು ನಿರ್ದೇಶಕ ಸಂದೀಪ್ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದಿನ ಅನಿಮಲ್ ಸಿನಿಮಾ ಹೋಲಿಸಿದರೆ ಪಾರ್ಟ್ 2 ಇನ್ನೂ ಹೆಚ್ಚು ವೈಲ್ಡ್ ಆಗಿರಲಿದೆ ಎಂದಿದ್ದಾರೆ. 2026ರಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಮಾತನಾಡಿದ್ದಾರೆ.
ಮುಂದಿನ ಭಾಗದಲ್ಲಿ ರಣ್‌ಬೀರ್ ಕಪೂರ್ ಪಾತ್ರದ ರಣವಿಜಯ್ ಮತ್ತು ಗೀತಾಂಜಲಿ ಪಾತ್ರಧಾರಿ ರಶ್ಮಿಕಾ ಸಂಬಂಧವನ್ನು ಪರೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಣಬೀರ್ ಅಸಲಿ ಮತ್ತು ನಕಲಿ ಮಧ್ಯೆ ಭಾರೀ ಟ್ವಿಸ್ಟ್ ಇರಲಿದೆಯಂತೆ.
ಮೊದಲ ಭಾಗದಲ್ಲಿ ಅನಿಲ್ ಕಪೂರ್ ಮತ್ತು ರಣ್‌ಬೀರ್ ಕಪೂರ್ ಅವರ ಅಪ್ಪ-ಮಗನ ಸಂಬಂಧವನ್ನು ಅದ್ಭುತವಾಗಿ ತೋರಿಸಿದ್ದರು. ರಶ್ಮಿಕಾ, ತೃಪ್ತಿ ದಿಮ್ರಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ರಣ್‌ಬೀರ್ ಮಾಸ್ ಆ್ಯಕ್ಷನ್‌ಗೆ ಫ್ಯಾನ್ಸ್‌ಗೆ ಫಿದಾ ಆಗಿದ್ದರು. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು.