ಬಾಲಿವುಡ್‌ನ (Bollywood) ನಿರೀಕ್ಷಿತ ಸಿನಿಮಾ ‘ಅನಿಮಲ್’ (Animal) ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದೀಗ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಅನಿಮಲ್ ಚಿತ್ರದಲ್ಲಿನ ರಣ್‌ಬೀರ್ ಖಡಕ್ ಲುಕ್ ರಿವೀಲ್ ಮಾಡಿ, ಚಿತ್ರದ ಟೀಸರ್ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದೇ ಸೆ.28ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಅನಿಮಲ್ ಚಿತ್ರದಲ್ಲಿ ರಣ್‌ಬೀರ್ ಕಪೂರ್ (Ranbir Kapoor) ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ರಣ್‌ಬೀರ್‌ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆಯಾಗಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ರಣ್‌ಬೀರ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕೂಲಿಂಗ್ ಗ್ಲ್ಯಾಸ್ ಧರಿಸಿ, ಸಿಗರೇಟ್ ಬಾಯಲಿಟ್ಟಿರೋ ಲುಕ್‌ನಲ್ಲಿ ನಟ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್
View this post on Instagram
ರಣ್‌ಬೀರ್ ಕಪೂರ್ ಹುಟ್ಟುಹಬ್ಬದಂದು ಸೆ.28ಕ್ಕೆ ಬೆಳಿಗ್ಗೆ 10 ಗಂಟೆಗೆ ‘ಅನಿಮಲ್’ ಟೀಸರ್ ರಿಲೀಸ್ ಆಗಲಿದೆ. ಇನ್ನೂ ಮನಾಲಿ, ಹಿಮಾಚಲ ಪ್ರದೇಶ ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಗುಣಮಟ್ಟದ ದೃಷ್ಟಿಯಿಂದ ರಿಲೀಸ್ ಡೇಟ್ ಮುಂದೂಡಲಾಗಿದ್ದು, ಡಿ.1ಕ್ಕೆ ಅನಿಮಲ್ ಸಿನಿಮಾ ರಿಲೀಸ್ ಆಗಲಿದೆ.
ಬಿಗ್ ಬಿ ಜೊತೆಗಿನ ‘ಗುಡ್ ಬೈ’ (Good Bye) ಮತ್ತು ‘ಮಿಷನ್ ಮಜ್ನು’ ಬಳಿಕ ರಶ್ಮಿಕಾ ನಟನೆಯ ಬಾಲಿವುಡ್ 3ನೇ ಪ್ರಾಜೆಕ್ಟ್ ಅನಿಮಲ್ ಚಿತ್ರವಾಗಿದ್ದು, ಸಿನಿಮಾದ ಬಗ್ಗೆ ಶ್ರೀವಲ್ಲಿ ಫ್ಯಾನ್ಸ್‌ಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿದೆ. ರಣ್‌ಬೀರ್-ರಶ್ಮಿಕಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.