Tuesday, 17th July 2018

Recent News

ನ್ಯೂಯಾರ್ಕ್‍ನಲ್ಲಿ ಪಾಕ್ ನಟಿ ಜೊತೆ ಧಮ್ ಎಳೆದ ರಣ್‍ಬೀರ್ ಕಪೂರ್!

ಮುಂಬೈ: ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ ನಡೆದ ಗ್ಲೊಬಲ್ ಟೀಚರ್ಸ್ ಪ್ರೈಸ್‍ನ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಮತ್ತು ಪಾಕಿಸ್ತಾನ ನಟಿ ಮಹಿರಾ ಖಾನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ರಣ್‍ಬೀರ್ ಕಪೂರ್ ಮತ್ತು ನಟಿ ಮಹಿರಾ ಖಾನ್ ನ್ಯೂಯಾರ್ಕ್‍ನ ಬೀದಿಯಲ್ಲಿ ಜೊತೆಯಾಗಿ ಧೂಮಪಾನ ಮಾಡಿದ್ದಾರೆ. ಮಹಿರಾ ಖಾನ್ ಇತ್ತೀಚಿಗೆ ಶಾರೂಖ್ ಖಾನ್ ನಟನೆಯ ‘ರಾಯಿಸ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಫೋಟೋದಲ್ಲಿ ಮಹಿರಾ ಬ್ಯಾಕ್‍ಲೆಸ್ ಇರುವ ಬಿಳಿ ಡ್ರೆಸ್ ಅಲ್ಲಿ ಕಾಣಿಸಿಕೊಂಡಿದ್ದು ರಣ್‍ಬೀರ್ ಕಪೂರ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.

ಡೇಟಿಂಗ್ ಮಾಡುತ್ತಿದ್ದೀರಾ ಎನ್ನುವ ಸುದ್ದಿಯನ್ನು ರಣ್‍ಬೀರ್ ಹಾಗೂ ಮಹಿರಾ ನಿರಾಕರಿಸಿದ್ದಾರೆ. ಈ ಇಬ್ಬರು ಕಲಾವಿದರು ಜೊತೆಯಾಗಿ ದುಬೈ ಹೋಗಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ರಣ್‍ಬೀರ್ ನಾನು ಸಿಂಗಲ್ ಎಂದು ಹೇಳಿಕೊಂಡಿದ್ದಾರೆ.

ಈ ಗಾಸಿಪ್‍ಗಳ ಬಗ್ಗೆ ಮಹಿರಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವ ಮೂಲಕ ಉತ್ತರ ಕೊಟ್ಟಿದ್ದಾರೆ. ಮಹಿರಾ ಹಾಕಿದ ಫೋಟೋದಲ್ಲಿ ‘ಮೊದಲ ಬಾರಿ ಇಲ್ಲ, ಎರಡನೇ ಬಾರಿಯೂ ಇಲ್ಲ’ ಎನ್ನುವ ಫೋಟೋವೊಂದನ್ನು ಹಾಕಿದ್ದರು.

Leave a Reply

Your email address will not be published. Required fields are marked *