ಕೊನೆಗೂ ಫಿಕ್ಸ್ ಆಯ್ತು ರಣ್‍ಬೀರ್, ಆಲಿಯಾ ಮದುವೆ ದಿನಾಂಕ

Public TV
2 Min Read
ranbir alia

ಬಾಲಿವುಡ್ ಕ್ಯೂಟ್ ಕಪಲ್‍ಗಳಲ್ಲಿ ರಣ್‍ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕೂಡ ಒಂದು. ಕೊರೋನಾ ಕಾರಣದಿಂದಾಗಿ ಹಲವಾರು ತಿಂಗಳುಗಳಿಂದ ಈ ಜೋಡಿಯ ಮದುವೆಗೆ ಕಾಲ ಕೂಡಿ ಬಂದಿರಲಿಲ್ಲ. ಇಷ್ಟು ದಿನ ಆಲಿಯಾ, ರಣ್‍ಬೀರ್ ಮದುವೆ ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, ರಣ್‍ಬೀರ್ ಹಾಗೂ ಆಲಿಯಾ ಭಟ್‍ಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಇದೇ ತಿಂಗಳಿನಲ್ಲಿ ಈ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಚಾರವನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲೂ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ ಎಂದು ರಣ್‍ಬೀರ್ ಆಪ್ತ ವಲಯದವರು ತಿಳಿಸಿದ್ದಾರೆ.

ranbir alia

ಕಳೆದ ಸುಮಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ರಣ್‍ಬೀರ್ ಹಾಗೂ ಆಲಿಯಾ, 2018ರಲ್ಲಿ ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಅವರ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ರಿಲೇಶನ್ ಶಿಪ್ ಬಗ್ಗೆ ಬಾಯ್ಬಿಟ್ಟಿದ್ದರು. ಸದ್ಯ ಹಸೆಮಣೆ ಏರುತ್ತಿರುವ ಈ ಜೋಡಿಯ ಮದುವೆ ಇದೇ ಏಪ್ರಿಲ್ 13ರಿಂದ 17ರವರೆಗೂ ನಡೆಯಲಿದೆ. ಮದುವೆ ವೇಳೆ ಸಂಗೀತ್ ಮತ್ತು ಮೆಹಂದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇನ್ನೂ ಈ ವಿಚಾರವನ್ನು ಕಪೂರ್ ಹಾಗೂ ಭಟ್ ಕುಟುಂಬಸ್ಥರು ಗುಟ್ಟುಗುಟ್ಟಾಗಿಟ್ಟಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

Ranbir 3

ಮದುವೆ ವೇಳೆ ಆಲಿಯಾ ಭಟ್ ಮನೀಶ್ ಮಲ್ಹೋತ್ರಾ ವಸ್ತ್ರ ವಿನ್ಯಾಸಗೊಳಿಸಿರುವ ಸಂಪ್ರದಾಯಿಕ ಉಡುಪಿನಲ್ಲಿ ಮಿಂಚಲಿದ್ದು, ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮಾತ್ರ ಪಾಲ್ಗೊಳ್ಳಲಿದ್ದಾರೆ ಮತ್ತು ಏಪ್ರಿಲ್ ಅಂತ್ಯದಲ್ಲಿ ಏರ್ಪಡಿಸಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಆಪ್ತರು, ಸ್ನೇಹಿತರು, ಉದ್ಯಮಿಗಳು ಹಾಗೂ ಇತರೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

Ranbir 2

ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಯಂತೆಯೇ ರಣ್‍ಬೀರ್ ಮತ್ತು ಆಲಿಯಾ ವಿವಾಹ ಚೆಂಬೂರಿನ ಆರ್‍ಕೆ ಹೌಸ್‍ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ರಣ್‍ಬೀರ್ ಕಪೂರ್ ತಮ್ಮ ಪೋಷಕರು ವಿವಾಹವಾದಂತಯೇ ಮದುವೆಯಾಗಲು ಇಷ್ಟಪಟ್ಟಿದ್ದರಿಂದ ಈ ಸ್ಥಳದಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *