ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ರಣ್‍ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಫೋಟೋ ವೈರಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಈ ಫೋಟೋದಲ್ಲಿ ಆಲಿಯಾ ವಧುವಿನಂತೆ ತಯಾರಾಗಿದ್ದಾರೆ. ಅಲ್ಲದೆ ರಣ್‍ಬೀರ್ ಕಪೂರ್ ಅವರು ಕೂಡ ವರನ ಗೆಟಪ್‍ನಲ್ಲಿ ಆಲಿಯಾ ಮುಂದೆ ನಿಂತಿದ್ದಾರೆ. ಈ ಫೋಟೋವನ್ನು ರಣ್‍ಬೀರ್, ಆಲಿಯಾ ಫ್ಯಾನ್‍ಪೇಜ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈ ಫೋಟೋ ನೋಡಿ ಅಭಿಮಾನಿಗಳು ಇಬ್ಬರು ಮದುವೆ ಆಗಿದ್ದಾರಾ ಎಂದು ಆಶ್ಚರ್ಯಪಡುತ್ತಿದ್ದಾರೆ.
ವೈರಲ್ ಆಗಿರುವ ಫೋಟೋ ಫೇಕ್ ಆಗಿದ್ದು, ಆಲಿಯಾ ಇರುವ ಫೋಟೋದಲ್ಲಿ ರಣ್‍ಬೀರ್ ಕಪೂರ್ ಅವರನ್ನು ಫೋಟೋಶಾಪ್ ಮಾಡಲಾಗಿದೆ. ಆಲಿಯಾ ನಟಿಸಿದ ಜಾಹೀರಾತಿನ ಫೋಟೋ ಇದ್ದಾಗಿದ್ದು, ಇದರಲ್ಲಿ ಅವರು ವಧುವಿನಂತೆ ಸಿಂಗಾರಗೊಂಡಿದ್ದಾರೆ. ಈ ಜಾಹೀರಾತಿನಲ್ಲಿ ವರ ರಣ್‍ಬೀರ್ ಬದಲು ಬೇರೆ ಮಾಡೆಲ್ ನಟಿಸಿದ್ದರು. ಆದರೆ ಕೆಲವರು ತಮಾಷೆಗಾಗಿ ರಣ್‍ಬೀರ್ ಹಾಗೂ ಆಲಿಯಾ ಮದುವೆ ಆಗುತ್ತಿರುವಂತೆ ಫೋಟೋಶಾಪ್ ಮಾಡಿ ವೈರಲ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಆಲಿಯಾ ಭಟ್ ಅವರು ಮುಂದಿನ ವರ್ಷದಲ್ಲಿ ಮದುವೆಯಾಗಲು ಈಗಲೇ ಅವರು ಸಬ್ಯಸಾಚಿ ವಿನ್ಯಾಸದ ಲೆಹೆಂಗಾವನ್ನು ಆರ್ಡರ್ ಮಾಡಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ರಣ್‍ಬೀರ್ ಕಪೂರ್ ಹಾಗೂ ಆಲಿಯಾ ಭಟ್ 2018ರಿಂದ ಒಬ್ಬರಿಗೊಬ್ಬರು ಡೇಟಿಂಗ್ ನಡೆಸುತ್ತಿದ್ದರು. ಈಗ ಅವರು 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಅವರು ಈಗಲೇ ಲೆಹೆಂಗಾ ಬುಕ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.
ಸದ್ಯ ರಣ್‍ಬೀರ್ ಹಾಗೂ ಆಲಿಯಾ ಈಗ `ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.