ಬಾಲಿವುಡ್ನಲ್ಲಿ (Bollywood) ಬಯೋಪಿಕ್ಗಳ (Biopic) ಹಾವಳಿ ಜೋರಾಗಿದೆ. ಸಿನಿಮಾ, ರಾಜಕೀಯ, ಕ್ರಿಡೆ, ಹೀಗೆ ಬೇರೇ ಬೇರೇ ಕ್ಷೇತ್ರಗಳ ಮಿಂಚಿದ್ದ ತಾರೆಯರ ಬದುಕು ಸಿನಿಮಾವಾಗಿ ತೆರೆಯ ಮೇಲೆ ಮಿಂಚುತ್ತಿದೆ. ಇದೀಗ ಕ್ರಿಕೆಟ್ ಲೋಕದ ದಿಗ್ಗಜ ಕ್ರಿಕೆಟಿಗ ಸೌರವ್ ಗಂಗೂಲಿ ಬಯೋಪಿಕ್ಗೆ ಸಕಲ ಸಿದ್ಧತೆ ನಡೆಯುತ್ತಿದೆ. ಸೌರವ್ ಗಂಗೂಲಿ (Sourav Ganguly) ಅವರ ಪಾತ್ರಕ್ಕೆ ಯಾವ ನಟ ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.
ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳು ತೆರೆಯ ಮೇಲೆ ಮೋಡಿ ಮಾಡಿದೆ. ಎಂ.ಎಸ್ ಧೋನಿ ಅವರ ಜೀವನದ ಕಥೆಯನ್ನ ನಟ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದರು. ಬಳಿಕ ಸಂಜಯ್ ದತ್ ಅವರ ಕಥನವನ್ನ ರಣ್ಬೀರ್ ಕಪೂರ್ ತೆರೆಯ ಮೇಲೆ ನಟಿಸಿ ಕಮಾಲ್ ಮಾಡಿದ್ದರು. ಇದನ್ನೂ ಓದಿ: ಬ್ರಹ್ಮಚಾರಿಗಳ ಪಾದಯಾತ್ರೆಗೆ ಚಾಲನೆ ನೀಡಿದ ನಟ ಧನಂಜಯ್
ಸೌರವ್ ಗಂಗೂಲಿ ಅವರ ಕ್ರಿಕೆಟ್ ಲೋಕದ ಸಾಧನೆಯನ್ನೆ ತೆರೆಯ ಮೇಲೆ ತೋರಿಸಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸೌರವ್ ಗಂಗೂಲಿ ಪಾತ್ರಕ್ಕೆ ಜೀವ ತುಂಬಲು ರಣ್ಬೀರ್ ಕಪೂರ್ (Ranbir Kapoor) ಫಿಕ್ಸ್ ಆಗಿದ್ದಾರೆ. ಈ ಹಿಂದೆ ಸಂಜಯ್ ದತ್ ಅವರ ಬಯೋಪಿಕ್ ಮಾಡಿ ರಣ್ಬೀರ್ ಸೈ ಎನಿಸಿಕೊಂಡರು. ಈಗ ಸೌರವ್ ಗಂಗೂಲಿ ಪಾತ್ರಕ್ಕೆ ರಣ್ಬೀರ್ ಅವರೇ ಸೂಕ್ತ ಎಂದೆನಿಸಿ ಫೈನಲ್ ಆಗಿದ್ದಾರಂತೆ.
ಈಗಾಗಲೇ ಸೌರವ್ ಜೀವನದ ಕಥೆ ರೆಡಿಯಾಗಿದ್ದು, ಸಿನಿಮಾ 200-250 ಕೋಟಿ ರೂಪಾಯಿ ಬಿಗ್ ಬಜೆಟ್ನಲ್ಲಿ ಸಿನಿಮಾ ಮೂಡಿ ಬರಲಿದೆ. ರಣ್ಬೀರ್ ಕಪೂರ್ ಕೂಡ ತಮ್ಮ ಹೊಸ ಸಿನಿಮಾಗಾಗಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಅಪ್ಡೇಟ್ ಸಿಗಲಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k