ಬಾಲಿವುಡ್ ನಟ ರಣ್ಬೀರ್ ಕಪೂರ್ ತಂದೆಯಾಗುತ್ತಿರುವ ವಿಚಾರ ರಿವೀಲ್ ಆದ ಬೆನ್ನಲ್ಲೇ ವಾಣಿ ಕಪೂರ್ ಜೊತೆಗಿನ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದೆ. ಅಂಡರ್ ವಾಟರ್ನಲ್ಲಿ ವಾಣಿ ಜೊತೆ ರಣ್ಬೀರ್ ರೊಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.
View this post on Instagram
ಇತ್ತೀಚೆಗಷ್ಟೇ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೊಸ ಅತಿಥಿಯ ಆಗಮನದ ಕುರಿತು ಗುಡ್ ನ್ಯೂಸ್ ಕೊಟ್ಟಿದ್ದರು. ಈ ಬೆನ್ನಲ್ಲೇ `ಶಂಶೇರಾ’ ಚಿತ್ರದ ರೊಮ್ಯಾಂಟಿಕ್ ಸಾಂಗ್ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಾಂಗ್ನಲ್ಲಿ ರಣ್ಬೀರ್ ಜತೆ ನಟಿ ವಾಣಿ ರೊಮ್ಯಾಂಟಿಕ್ ಆಗಿ ಸೊಂಟ ಬಳುಕಿಸಿದ್ದಾರೆ. `ಶಂಶೇರಾ’ ಚಿತ್ರದ ಟ್ರೈಲರ್ನಲ್ಲಿ ರಣ್ಬೀರ್ ಅವರನ್ನ ದ್ವಿಪಾತ್ರದಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದ ಬೆನ್ನಲ್ಲೇ ಚಿತ್ರದ ರೊಮ್ಯಾಂಟಿಕ್ ಸಾಂಗ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಮಕ್ಕಳ ಹೊಂದುವ ಕುರಿತು ಆಲಿಯಾ ಬಗ್ಗೆ ಅಚ್ಚರಿಯ ವಿಚಾರ ರಿವೀಲ್ ಮಾಡಿದ ರಣ್ಬೀರ್ ಕಪೂರ್
ಈ ಚಿತ್ರದ ಸಾಂಗ್ ಅಷ್ಟೇ ಅಲ್ಲ, `ಶಂಶೇರಾ’ ಜೋಡಿಯ ಫೋಟೋಶೂಟ್ ಕೂಡ ಸಖತ್ ವೈರಲ್ ಆಗಿದೆ. ಇವರಿಬ್ಬರ ಫೋಟೋ ನೋಡಿ ಒಂದಿಷ್ಟು ಜನ ಮೆಚ್ಚಿಕೊಂಡಿದ್ದರೆ, ಕೆಲವು ನೆಟ್ಟಿಗರು ನೀವು ತಂದೆಯಾಗುತ್ತೀದ್ದೀರಾ ಇದೆಲ್ಲಾ ಬೇಕಾ ಎಂದು ರಣ್ಬೀರ್ಗೆ ಪ್ರಶ್ನೆ ಮಾಡಿದ್ದಾರೆ. ಒಟ್ನಲ್ಲಿ ರಣ್ಬೀರ್ ನಟನೆಯ `ಶಂಶೇರಾ’ ಚಿತ್ರದ ಸಾಂಗ್ ಮತ್ತು ಫೋಟೋಸ್ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ. ಬಹುಭಾಷೆಗಳಲ್ಲಿ ಜುಲೈ 22ಕ್ಕೆ ತೆರೆಗೆ ಬರಲಿರುವ `ಶಂಶೇರಾ’ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]