ದಕ್ಷಿಣದ ಹೆಸರಾಂತ ನಟಿ ರಮ್ಯಾಕೃಷ್ಣ (Ramya Krishna) ‘ಕಾವಾಲಿ’ (Kaavaali) ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ನಟಿಯ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಧ್ಯವಯಸ್ಸಿನಲ್ಲೂ ರಮ್ಯಾ ಮಾದಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಹಾಡು ನೋಡುಗರಿಗೆ ಹುಚ್ಚೆಬ್ಬಿಸಿದೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕನ್ನಡದ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಕಾವಾಲಿ ಸಾಂಗ್ ಬಿಡುಗಡೆಯಾಗಿದ್ದು, ಆ ಹಾಡಿಗೆ ಲಕ್ಷಾಂತರ ಜನರು ಹುಕ್ ಸ್ಟೆಪ್ (Hook Step) ಹಾಕಿದ್ದಾರೆ. ಭಾರತದಾದ್ಯಂತ ಈ ಹಾಡಿಗೆ ಕುಣಿದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ
ಬೋಲ್ಡ್ ಪಾತ್ರಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ನಟಿ ತಮನ್ನಾ ಜೈಲರ್ (Jailer) ಸಿನಿಮಾದಲ್ಲೂ ಅದನ್ನು ಮುಂದುವರೆಸಿದ್ದಾರೆ. ಜೈಲರ್ ಸಿನಿಮಾದ ಕಾವಾಲ ಹಾಡಿನಲ್ಲಿ ನಟಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ತಮನ್ನಾ (Tamannaah) ಮೈಮಾಟಕ್ಕೆ ಅಭಿಮಾನಿಗಳು ಸುಸ್ತಾಗಿದ್ದಾರೆ.
ರಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಇನ್ನೇನು ಬಿಡುಗಡೆಗೂ ಸಿದ್ಧವಾಗಿದೆ. ಮೊನ್ನೆಯಷ್ಟೇ ಹಾಡು ಬಿಡುಗಡೆಯ ಸಮಾರಂಭಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಸಿನಿಮಾದ ಪ್ರಚಾರಕ್ಕೂ ಮುನ್ನ, ಸಿನಿಮಾದ ಮೊದಲ ಹಾಡನ್ನು (Song) ಚಿತ್ರತಂಡ ರಿಲೀಸ್ ಮಾಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಹಾಡನ್ನು ಅಭಿಮಾನಿಗಳು ಸವಿದಿದ್ದಾರೆ.
Web Stories