ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಮಾಡಿದ್ದ ಕ್ರೇಜ್ ಅಷ್ಟಿಷ್ಟಲ್ಲ. ತೆರೆಯ ಹಿಂದೆಯೂ ತೆರೆಯ ಮುಂದೆಯೂ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದ್ದರು ರಮ್ಯಾ. ವಿಶೇಷವಾಗಿ ರಮ್ಯಾ ಸಿನಿಮಾಗಳಲ್ಲಿ ಕಾಸ್ಟ್ಯೂಮ್ ವಿಚಾರಕ್ಕೂ ಹೆಚ್ಚು ಸುದ್ದಿಯಾಗುತ್ತಿದ್ದರು. ಹೀಗೆ `ರಕ್ತ ಕಾಶ್ಮೀರ’ ಚಿತ್ರದ ಹಾಡೊಂದಕ್ಕಾಗಿ ರಮ್ಯಾ 75 ಸಾವಿರ ರೂಪಾಯಿ ಬೆಲೆಯ ಸೀರೆ ಉಟ್ಟಿದ್ದರಂತೆ.
15 ವರ್ಷಗಳ ಹಿಂದೆಯೇ 75 ಸಾವಿರ ರೂಪಾಯಿಗೆ ಬೆಲೆಬಾಳುವ ಸೀರೆಯನ್ನು ಒಂದು ನಿಮಿಷ ಕಾಣಿಸಿಕೊಳ್ಳುವ ಹಾಡಿಗಾಗಿ ರಮ್ಯಾ ಧರಿಸಿದ್ದರು ಎಂಬ ರಹಸ್ಯ ಇದೀಗ ರಿವೀಲ್ ಆಗಿದೆ.
ರಮ್ಯಾ-ಉಪೇಂದ್ರ ನಟಿಸಿರುವ ರಕ್ತಕಾಶ್ಮೀರ ಚಿತ್ರದ ಹಾಡಿಗಾಗಿ ಈ ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಬಳಿ ಬಂದ ರಮ್ಯಾ, ಅಂಕಲ್ ನಾನೊಂದು ಸೀರೆ ನೋಡಿದ್ದೇನೆ. ಅದನ್ನ ನೀವು ಚಿತ್ರೀಕರಣಕ್ಕಾಗಿ ಕೊಡಿಸಬೇಕು ಎಂದರಂತೆ. ಆಗಲಿ ಎಂದು ರಮ್ಯಾ ಇಷ್ಟ ಪಟ್ಟಿದ್ದ ಆ ಸೀರೆಯನ್ನ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೊಡಿಸಿದ್ದರಂತೆ. ಅದರ ಬೆಲೆ ಆಗಲೇ 75 ಸಾವಿರ ರೂಪಾಯಿ ಆಗಿತ್ತು ಎಂದಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಇದರಿಂದಾಗಿ ರಮ್ಯಾ ಉಟ್ಟಿದ್ದ ಸೀರೆಯ ವೈಭವ ಬೆಳಕಿಗೆ ಬಂದಿದೆ.

