ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದ ರಾಗಾಗೆ ರಮ್ಯಾ ವಿಶ್

Public TV
2 Min Read
RAMYA

ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ (Ramya) ಅವರು ಸದ್ಯ ಲಂಡನ್‌ನಲ್ಲಿ (London) ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬರುವ ಸಿನಿಮಾಗಾಗಿ ಮತ್ತಷ್ಟು ಫಿಟ್ & ಫೈನ್ ಆಗಬೇಕು ಅಂತಾ ತಯಾರಿ ಮಾಡ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಹುಟ್ಟುಹಬ್ಬಕ್ಕೆ ರಮ್ಯಾ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸದ್ಯ ಭಾರಿ ವೈರಲ್ ಆಗುತ್ತಿದೆ.

Ramya 3

ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿರುವಾಗಲೇ ರಾಜಕೀಯ ಅಖಾಡಕ್ಕೆ ಇಳಿದವರು ನಟಿ ರಮ್ಯಾ. ಸಿನಿಮಾ-ರಾಜಕೀಯ ಎರಡು ಕ್ಷೇತ್ರದಲ್ಲೂ ರಮ್ಯಾ ಗುರುತಿಸಿಕೊಂಡಿದ್ದಾರೆ. ಸದ್ಯ ರಾಜಕೀಯದಿಂದ ದೂರವಿದ್ರು ಕೂಡ ಕಾಂಗ್ರೆಸ್ ಪಕ್ಷದ ಜೊತೆ ರಮ್ಯಾಗೆ ಉತ್ತಮ ಒಡನಾಟವಿದೆ. 53ನೇ ವಸಂತಕ್ಕೆ ಕಾಲಿಟ್ಟಿರುವ ರಾಹುಲ್ ಗಾಂಧಿ ಬರ್ತ್‌ಡೇಗೆ (ಜೂನ್ 19) ವಿಶೇಷವಾಗಿ ರಮ್ಯಾ ಶುಭಕೋರಿದ್ದಾರೆ.

ramya and rahul gandhi weekend with ramesh

ನನ್ನ ಮುಖದಲ್ಲಿ ಮತ್ತೆ ನಗು ಮೂಡಿಸಿದ ವ್ಯಕ್ತಿ ಎಂದು ರಾಹುಲ್ ಗಾಂಧಿ ಅವರನ್ನು ರಮ್ಯಾ ಬಣ್ಣಿಸಿದ್ದಾರೆ. ಈ ಮೊದಲು ಕಾಂಗ್ರೆಸ್ ಪಕ್ಷದ ಐಟಿ ಸೆಲ್‌ನಲ್ಲಿ ರಮ್ಯಾ ಅವರು ಕೆಲಸ ಮಾಡಿ ಗಮನ ಸೆಳೆದಿದ್ದರು. ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದವರು ಎಂದು ಕೂಡ ರಮ್ಯಾ (Ramya) ಹೇಳಿದ್ದಾರೆ. ಆ ಮೂಲಕ ಅವರ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ (Birthday) ವಿಶ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ:ರಾಮ್ ಚರಣ್ ಮಗುವಿಗೆ ‘ನಾಟು ನಾಟು’ ಗಾಯಕನಿಂದ ಸ್ಪೆಷಲ್ ಗಿಫ್ಟ್

RAMYA 5

ಮೋಹಕತಾರೆ ರಮ್ಯಾ ಸಿನಿ ಜರ್ನಿಗೆ ಇದೀಗ 20 ವರ್ಷಗಳಾಗಿದೆ. ಅಂದು ಸಿನಿಮಾ ಕೆರಿಯಲ್‌ನಲ್ಲಿ ಬೇಡಿಕೆಯಿರುವಾಗಲೇ ಚಿತ್ರರಂಗ ತೊರೆದು ರಾಜಕೀಯ ಅಖಾಡಕ್ಕೆ ನಟಿ ಕಾಲಿದ್ದರು. 2013 ರಾಜಕೀಯಕ್ಕೆ ಪ್ರವೇಶಿಸಿದ್ದರು. ವೇದಿಕೆಯಲ್ಲಿ ತಮ್ಮ ರಾಜಕೀಯ ಜೀವನ ನೆನಪಿಸಿಕೊಂಡ ರಮ್ಯಾ, ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ. ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಸಮಯವಾಗಿತ್ತು. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದೆ. ಮಂಡ್ಯ ಜನರ ಪ್ರೀತಿಯನ್ನು, ಅವರು ನೀಡಿದ ಧೈರ್ಯವನ್ನು ಮರೆಯುವಂತಿಲ್ಲ ಎಂದರು. ತಂದೆ ಕಳೆದುಕೊಂಡು ದುಃಖದಲ್ಲಿದ್ದ ತಮಗೆ ರಾಹುಲ್ ಗಾಂಧಿಯವರು ಮಾಡಿದ ಸಹಾಯವನ್ನು ಸಹ ರಮ್ಯಾ ನೆನಪಿಸಿಕೊಂಡರು.

ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೇಯವರು ನನ್ನ ತಂದೆ, ಮೂರನೇ ಅವರು ರಾಹುಲ್ ಗಾಂಧಿ ಎಂದು ಹೇಳಿಕೊಂಡು ರಮ್ಯಾ ಗದ್ಗದಿತರಾದರು. ನಾನು ಸುಳ್ಳು ಹೇಳಲ್ಲ. ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ತುಂಬಾ ರಾಹುಲ್ ಗಾಂಧಿ ಸಹಾಯ ಮಾಡಿದ್ರು. ಸಾವು ಅಂದ್ರೇನು ಬದುಕು ಅಂದ್ರೇನು ನಾವು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಮೂರನೇ ಪ್ರಭಾವಶಾಲಿ ಎಂದು ರಾಹುಲ್ ಗಾಂಧಿ ಬಗ್ಗೆ ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಮಾತನಾಡಿದ್ದರು.

Share This Article