ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಜಪಾನ್ ಗೆ ಹಾರಿದ್ದು, ಅಲ್ಲಿಂದಲೇ ವಯಸ್ಸಿನ ಮೇಘ ಸಂದೇಶವನ್ನೂ ಕಳುಹಿಸಿದ್ದಾರೆ. ಇವತ್ತು ತಮಗೀಗ 40 ವರ್ಷ ತುಂಬಿದ್ದು, ನಲವತ್ತರ ಕ್ಲಬ್ ನ ಸದಸ್ಯೆಯಾಗಿ ಬಡ್ತಿ ಪಡೆದಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ರಮ್ಯಾ ಅವರೇ ಹಂಚಿಕೊಂಡಿದ್ದಾರೆ.
Advertisement
ರಮ್ಯಾ ಅವರಿಗೆ ಡಾಲಿ ಧನಂಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಶುಭಾಶಯ ಕೋರಿದ್ದಾರೆ. ಬಹುತೇಕ ಸಂದೇಶಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಈ ಹುಟ್ಟು ಹಬ್ಬಕ್ಕೆ ರಮ್ಯಾ ಅವರಿಗೆ ಡಬಲ್ ಧಮಾಕಾ. ಒಂದು ಕಡೆ ಅವರ ನಿರ್ಮಾಣ ಸಂಸ್ಥೆಯಿಂದ ಬರುತ್ತಿರುವ ಸಿನಿಮಾ ಶೂಟಿಂಗ್ ಮುಗಿಸಿದೆ. ಮತ್ತೊಂದು ಕಡೆ ಇನ್ನಷ್ಟೇ ಅವರ ನಟನೆಯ ಉತ್ತರ ಕಾಂಡ ಚಿತ್ರ ಶೂಟಿಂಗ್ ಆಗಬೇಕಿದೆ. ಹಾಗಾಗಿ ರಮ್ಯಾ ಅವರಿಗೆ ಈ ಹುಟ್ಟು ಹಬ್ಬ ವಿಶೇಷವಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್ನಲ್ಲಿ ತಮಿಳು ನಟ ವಿಜಯ್ ಸೇತುಪತಿ
Advertisement
Advertisement
ರಮ್ಯಾ ಅವರ ಹುಟ್ಟು ಹಬ್ಬಕ್ಕೆ ಅವರ ಸಿನಿಮಾದ ಪೋಸ್ಟರ್ ಅಥವಾ ಉತ್ತರಕಾಂಡ ಸಿನಿಮಾದ ಫಸ್ಟ್ ಲುಕ್ ಏನಾದರೂ ರಿಲೀಸ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಮ್ಯಾ ಅವರು ಈ ದೇಶದಲ್ಲೇ ಇರದೇ ಇರುವ ಕಾರಣಕ್ಕಾಗಿ ಬಹುಶಃ ಬಿಡುಗಡೆ ಪ್ಲ್ಯಾನ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.