Connect with us

ರಾಜ್ಯ ಕಾಂಗ್ರೆಸ್ ಐಟಿ ಸೆಲ್‍ಗೆ ದಿಢೀರ್ ಭೇಟಿ ಕೊಟ್ಟ ರಮ್ಯಾ

ರಾಜ್ಯ ಕಾಂಗ್ರೆಸ್ ಐಟಿ ಸೆಲ್‍ಗೆ ದಿಢೀರ್ ಭೇಟಿ ಕೊಟ್ಟ ರಮ್ಯಾ

ಬೆಂಗಳೂರು: ಗುಜರಾತ್‍ನಲ್ಲಿ ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದ ಮಾದರಿಯಲ್ಲೇ ರಾಜ್ಯದಲ್ಲೂ ಬಿಜೆಪಿಗೆ ಕೌಂಟರ್ ನೀಡಲು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮುಂದಾಗಿದ್ದಾರೆ.

ಹೌದು, ಗುರುವಾರ ಸಂಜೆ ದಿಢೀರ್ ರಮ್ಯಾ ಕೆಪಿಸಿಸಿ ಐಟಿ ಸೆಲ್ ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಐಟಿ ಸೆಲ್‍ನ ಕಾರ್ಯ ನಿರ್ವಾಹಣೆ ಬಗ್ಗೆ ಮಾಹಿತಿ ಪಡೆದ ರಮ್ಯಾ ಸೋಶಿಯಲ್ ಮೀಡಿಯಾ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಪರಿಶೀಲನೆ ನಡೆಸಿದ್ದಾರೆ.

ಸೋಶಿಯಲ್ ಮಿಡಿಯಾ ತಂಡದ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ರಮ್ಯಾ ಮತ್ತಷ್ಟು ಸಕ್ರಿಯರಾಗುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಇನ್ನೊಂದು ತಿಂಗಳೀನಲ್ಲಿ ನಾನೇ ರಾಜ್ಯಕ್ಕೆ ಬಂದು ಚುನಾವಣೆ ಮುಗಿಯುವ ವರೆಗೆ ಇಲ್ಲಿಂದಲೆ ಐಟಿ ಸೆಲ್ ಹ್ಯಾಂಡಲ್ ಮಾಡುವುದಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

Advertisement
Advertisement