ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಳಿಯ ಸಿಕ್ಕಿದ್ದಾರೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಹೌದು, ಬಾಲಿವುಡ್‍ನ ಸೆಕ್ಸಿ ಗರ್ಲ್ ರಾಖಿ ಸಾವಂತ್ ಮೋದಿಯವರ ಮಗಳಂತೆ ಮತ್ತು ರಾಖಿಯ ಗೆಳೆಯ ಅಳಿಯನಂತೆ. ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ರಾಖಿ ಸಾವಂತ್ ಮಾಡಿಕೊಂಡಿರುವ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿಕೊಂಡು ‘ಮೋದಿಜಿ ನಿಮಗೆ ಅಳಿಯ ಸಿಕ್ಕಿದ್ದಾನೆ ನೋಡಿ’ ಅಂತಾ ಬರೆದು ರಾಖಿ ಸಾವಂತ್ ಮತ್ತು ಮೋದಿಯವರಿಗೂ ಟ್ಯಾಗ್ ಮಾಡಿದ್ದಾರೆ.
Advertisement
“मोदी जी आपका दामाद मिल गया है” @narendramodi @rakhisawant7 pic.twitter.com/RhSRLSxpIR
— Ramya/Divya Spandana (@divyaspandana) July 9, 2018
Advertisement
ಏನಿದೆ ವಿಡಿಯೋದಲ್ಲಿದೆ?:
ಜನರೇ ನನಗೆ (ರಾಖಿ) ಹುಡುಗ ಯಾವಾಗ ಸಿಗ್ತಾನೆ ಅಂತಾ ಕೇಳುತ್ತಿದ್ದೀರಿ. ಸದ್ಯ ನನಗೆ ಹುಡುಗ ಸಿಕ್ಕಿದ್ದು, ನೋಡಿ ಇವನೇ ನನ್ನ ಪ್ರಿಯತಮ. ಸದ್ಯ ನಾನು ನ್ಯೂಯಾರ್ಕ್ ನಲ್ಲಿದ್ದೇನೆ. ಒಮ್ಮೆ ನನ್ನ ಸ್ವೀಟ್ ಹಾರ್ಟ್ ಜೊತೆ ಮಾತನಾಡಿ. ಈ ವಿಡಿಯೋವನ್ನು ಪ್ರಧಾನಿ ಮೋದಿಯರು ಸೇರಿದಂತೆ ಎಲ್ಲ ಭಾರತೀಯರು ನೋಡುತ್ತಿದ್ದಾರೆ ಎಂದು ಗೆಳೆಯನಿಗೆ ಹೇಳುತ್ತಾರೆ. ಮೋದಿಜಿ ನನ್ನ ದೊಡ್ಡ ಅಭಿಮಾನಿಯಾಗಿದ್ದಾರೆ. ನೋಡಿ ಮೋದಿಯವರೇ ಕೊನೆಗೂ ನಿಮ್ಮ ಅಳಿಯ ಸಿಕ್ಕಿದ್ದಾನೆ ನೋಡಿಕೊಳ್ಳಿ. ನನಗೆ ಇಂಡಿಯಾದಲ್ಲಿ ಒಬ್ಬನೇ ಒಬ್ಬ ಹುಡುಗ ಸಿಗಲಿಲ್ಲ. ಈಗ ನ್ಯೂಯಾರ್ಕ್ ನಲ್ಲಿ ಒಬ್ಬ ಗೆಳೆಯ ಸಿಕ್ಕಿದ್ದಾನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
Advertisement
ಈ ವಿಡಿಯೋವನ್ನು ರಮ್ಯಾ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಆದ್ರೆ ಈ ವಿಡಿಯೋಗೆ ರಾಖಿ ಸಾವಂತ್ ಇದೂವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.