ಬೆಂಗಳೂರು: ಮಂಡ್ಯದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವೋಟ್ ಮಾಡಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ನೆಟ್ಟಿಗರು ಗರಂ ಆಗಿ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
ರಮ್ಯಾ ಟ್ವೀಟ್ಟರ್ ನಲ್ಲಿ” ಹೊಸದಾಗಿ ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರು ಬೇಗ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಸೇರಿಸಿಕೊಳ್ಳಿ. ಸಮಯ ಬೇಗ ಹೋಗುತಿದೆ. ಭವಿಷ್ಯವೂ ನಿಮ್ಮದಾಗಿದೆ” ಎಂದು ಟ್ವೀಟ್ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
All you young people who are eligible to vote, make sure you register to vote. Time is running out. Here’s the link https://t.co/G1GAaAm1gJ Make it count, the future is yours. pic.twitter.com/mEOmImOnfx
— Ramya/Divya Spandana (@divyaspandana) March 10, 2019
ರಮ್ಯಾ ಮಾಡಿರುವ ಟ್ವೀಟ್ ಗೆ ನೆಟ್ಟಿಗರು ಕೋಪಗೊಂಡು ಕಾಮೆಂಟ್ ಮಾಡುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವರು “ಮೊದಲು ನೀವು ಹೋಗಿ ವೋಟ್ ಹಾಕಿ. ಬೇರೆಯವರಿಗೆ ಹೇಳಲು ನಿಮಗೆ ಯಾವುದೇ ಹಕ್ಕಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಮೂರು ಬಾರಿಯೂ ಮತದಾನ ಮಾಡದೇ ತಪ್ಪಿಸಿಕೊಂಡ ರಮ್ಯಾನಿಂದ ಈಗ ಮತದಾನ ಜಾಗೃತಿ ಪಾಠ ಮಾಡುತ್ತಿದ್ದಾರೆ. ಡೆಲ್ಲಿ ಬಿಟ್ಟು ಮೊದಲು ಮತದಾನ ಮಾಡಿ, ಆಮೇಲೆ ಬೇರೆಯವರಿಗೆ ಉಪದೇಶ ಮಾಡಿ” ಎಂದು ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಬಂದಿರಲಿಲ್ಲ. ಇದಾದ ಬಳಿಕ ಮಂಡ್ಯ ಲೋಕಸಭಾ ಉಪಚುನಾವಣೆಯ ಸಮಯದಲ್ಲೂ ರಮ್ಯಾ ಆಗಮಿಸಿರಲಿಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿದ್ದು ಮತದಾನ ಮಾಡಲು ಆಗಮಿಸಿದ ರಮ್ಯಾ ವಿರುದ್ಧ ಮಂಡ್ಯದ ಮಂದಿ ಆಕ್ರೋಶ ಹೊರಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv