ಪ್ರಧಾನಿ ಮೋದಿಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ ರಮ್ಯಾ

Public TV
1 Min Read
modi ramya

ಬೆಂಗಳೂರು: ಟ್ವಿಟ್ಟರ್‍ನಲ್ಲಿ ಪ್ರಧಾನಿ ಮೋದಿಯನ್ನು ಕೆಣಕಲು ಹೋದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಕಿ, ಮಾಜಿ ಸಂಸದೆ ರಮ್ಯಾ ಈಗ ಪೇಚಿಗೆ ಸಿಲುಕಿದ್ದಾರೆ.

ಮೋದಿಯವರು ಅಸ್ಸಾಂ, ಗುಜರಾತ್, ಬಿಹಾರ ಪ್ರವಾಹ ಪೀಡಿತ ಜನರೊಂದಿಗೆ ಇರುವ ಒಂದೇ ಒಂದು ಫೋಟೋ ಸಿಗಲ್ಲ. ಒಂದು ವೇಳೆ ಯಾರಾದ್ರು ಅಂತಹ ಫೋಟೋ ತೋರಿಸಿದ್ರೆ ಅವರಿಗೆ 25 ಸಾವಿರ ರೂ. ಕೊಡುತ್ತೇನೆ ಅಂತ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ರು.

ಈ ಟ್ವೀಟ್‍ಗೆ ಹಲವು ಟೀಕೆಗಳು ಬಂದಿದ್ದು, ರಮ್ಯಾರ ಸಿನಿಮಾದ ಕೆಲ ಸ್ಟಿಲ್‍ಗಳನ್ನು ಪೋಸ್ಟ್ ಮಾಡಿ ಪ್ರವಾಹ ಪೀಡಿತ ಪ್ರದೇಶದಲ್ಲಿ ರಮ್ಯಾ ಮೇಡಂ ಎಂದು ಟ್ವೀಟ್ ಮಾಡಿದ್ದಾರೆ. ಇದ್ರಿಂದ ರಮ್ಯಾ ತೀವ್ರ ಪೇಚಿಗೆ ಸಿಲುಕಿದ್ದಾರೆ.

ಈ ಹಿಂದೆ ಪ್ರವಾಹ ಪೀಡಿತ ಗುಜರಾತ್‍ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದರ ಫೋಟೋ ಹಾಕಿ ರಮ್ಯಾ ಟೀಕೆ ಮಾಡಿದ್ದರು. ಇದಕ್ಕೆ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ರಮ್ಯಾರನ್ನ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಮೋದಿ ವಿರುದ್ಧ ಪೋಸ್ಟ್: ರಮ್ಯಾರನ್ನು ಶಿಲ್ಪಾಗಣೇಶ್ ತರಾಟೆಗೆ ತೆಗೆದುಕೊಂಡಿದ್ದು ಹೀಗೆ

ramya twitter 1

ramya twitter

Share This Article