ಬೆಂಗಳೂರು: ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ ಗೂಗಲ್ ವಿರುದ್ಧ ಹರಿಹಾಯ್ದಿದ್ದಾರೆ.
ರಮ್ಯಾ ಗೂಗಲ್ ಸರ್ಚ್ ಇಂಜಿನ್‍ನಲ್ಲಿ`India first pm’ (ಭಾರತದ ಮೊದಲ ಪ್ರಧಾನಿ) ಎಂದು ಟೈಪ್ ಮಾಡಿ ಹುಡುಕಿದ್ದಾರೆ. ಆಗ ಅವರಿಗೆ ಜವಾಹರಲಾಲ್ ನೆಹರೂ ಹೆಸರು ಬಂದಿದೆ. ಆದರೆ ಅದರಲ್ಲಿ ಫೋಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರದ್ದು ಕಾಣಿಸಿಕೊಂಡಿದೆ. ಇದರಿಂದ ರಮ್ಯಾ ಗೂಗಲ್ ವಿರುದ್ಧ ಕಿಡಿ ಕಾರಿದ್ದಾರೆ.
Advertisement
ರಮ್ಯಾ ಫೋಟೋ ನೋಡಿದ ನಂತರ ಅದರ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ಮತ್ತು ಗೂಗಲ್ ಇಂಡಿಯಾಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ, “ನಿಮ್ಮ ಕ್ರಮಾವಳಿಯಿಂದಾಗಿ ಹೀಗಾಗಿದೆ? ನಿಮ್ಮ ಸಂಗ್ರಹದಲ್ಲಿ ಬರೀ ಕಸಕಡ್ಡಿ ತುಂಬಿದೆ” ಎಂದು ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ
Advertisement
Advertisement
ರಮ್ಯಾ ಈ ರೀತಿ ಫೋಟೋ ಹಾಕಿ ಟ್ವೀಟ್ ಮಾಡಿದ ಕೂಡಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟಿಗರು ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ.
Advertisement
ನಿನ್ನೆಯಷ್ಟೇ ರಮ್ಯಾ ದೇಶದ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಮತ್ತೆ ಮೋದಿ ಕಾಲೆಳೆದಿದ್ದರು. ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ ಅನ್ನೋ ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ ಅಂತ ಹೇಳುವ ಮೂಲಕ ಲೇವಡಿ ಮಾಡಿದ್ದರು.
.@Google @GoogleIndia what algorithm of yours allows this?! You’re so full of junk- pic.twitter.com/GHyxh3fEWm
— Ramya/Divya Spandana (@divyaspandana) April 25, 2018