ಬೆಂಗಳೂರು: ಛತ್ತೀಸ್‍ಗಢದ ಸುಕ್ಮಾದಲ್ಲಿ ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದು, ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯವರನ್ನು ಟ್ವಿಟ್ಟರಿನಲ್ಲಿ ಟೀಕಿಸಿದ್ದಾರೆ.
`ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಗೋವುಗಳು, ಕಾಲೆಳೆಯುವವರು ಮಾತ್ರ ಸುರಕ್ಷಿತ. ಈ ಸರ್ಕಾರದಲ್ಲಿ ಸೇನೆ, ಪ್ರಜೆಗಳು, ಆಧಾರ್ ಕಾರ್ಡ್ ಮಾಹಿತಿಗೆ ರಕ್ಷಣೆಯೇ ಇಲ್ಲ. ಕೇಂದ್ರ ಗೃಹ ಸಚಿವಾಲಯ, ಗುಪ್ತಚರ ಇಲಾಖೆಯ ವೈಫಲ್ಯದಿಂದಲೇ ಸಿಆರ್‍ಪಿಎಫ್ ಯೋಧರ ಹುತಾತ್ಮಕ್ಕೆ ಕಾರಣ. ಮೋದಿ ಸಿಎಂ ಆಗಿದ್ದಾಗ ದೂರವಾಣಿ ಕದ್ದಾಲಿಕೆಗೆ ಆಡಳಿತ ಯಂತ್ರ ಬಳಸಿಕೊಂಡಿದ್ದರು. ಆದರೆ ಸಿಆರ್‍ಪಿಎಫ್ ಯೋಧರ ರಕ್ಷಣೆಗೆ ಆಡಳಿತ ಯಂತ್ರ ಬಳಸಿಕೊಂಡಿಲ್ಲ ಅಂತಾ ರಮ್ಯಾ ಟೀಕಿಸಿದ್ದಾರೆ.
Advertisement
ಇದನ್ನೂ ಓದಿ: ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು
Advertisement
ಟೀಕಿಸಲು ಕಾರಣವೇನು?: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಸೋಮವಾರ ನಕ್ಸಲರು ಮತ್ತು ಯೋಧರ ಮಧ್ಯೆ ಗುಂಡಿನ ದಾಳಿ ನಡೆದಿತ್ತು. ಈ ಗುಂಡಿನ ಚಕಮಕಿಯಲ್ಲಿ 24 ಮಂದಿ ಸಿಆರ್ ಪಿ ಎಫ್ ಯೋಧರು ಹುತಾತ್ಮರಾಗಿದ್ದರು. ಇನ್ನು ಘಟನೆಯಲ್ಲಿ 6 ಮಂದಿ ಸಿಆರ್ ಪಿ ಎಫ್ ಯೋಧರು ಗಾಯಗೊಂಡಿದ್ದರು.
Advertisement
Only cows & trolls are protected-
— Divya Spandana/Ramya (@divyaspandana) April 24, 2017
Advertisement
Does the Home ministry have a job or not?Intel failure.
No one is safe with this Govt.Not the army not the civilians nor our Aadhar details- https://t.co/AjgkPNnUbq
— Divya Spandana/Ramya (@divyaspandana) April 24, 2017