ಟಿವಿ ಲೋಕದ ಕನ್ನಡಿಗರ ನೆಚ್ಚಿನ ಶೋ ವೀಕೆಂಡ್ ವಿತ್ ರಮೇಶ್ ವಾರಾಂತ್ಯದಲ್ಲಿ ರಮ್ಯಾ ಭಾಗವಹಿಸಿದ್ದರು. ತನ್ನ ಸಾಧನೆಯ ಕಥೆಯನ್ನ ಈ ಶೋ ಮೂಲಕ ಅಭಿಮಾನಿಗಳಿಗೆ ತಿಳಿಸಿಕೊಟ್ಟರು. ಈ ವೇಳೆ ರಾಜಕೀಯ (Politics) ಜೀವನದ ಬಗ್ಗೆ ನಟಿ ಮಾತನಾಡಿದ್ದಾರೆ. ತನ್ನ ಜೀವನದಲ್ಲಿ ರಾಹುಲ್ ಗಾಂಧಿ ಅವರು ಪ್ರಭಾವ ಬೀರಿರುವ ಬಗ್ಗೆ ರಮ್ಯಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ
Advertisement
ಮೋಹಕತಾರೆ ರಮ್ಯಾ (Ramya) ಸಿನಿ ಜರ್ನಿಗೆ ಇದೀಗ 20 ವರ್ಷಗಳಾಗಿದೆ. ಅಂದು ಸಿನಿಮಾ ಕೆರಿಯಲ್‌ನಲ್ಲಿ ಬೇಡಿಕೆಯಿರುವಾಗಲೇ ಚಿತ್ರರಂಗ ತೊರೆದು ರಾಜಕೀಯ ಅಖಾಡಕ್ಕೆ ನಟಿ ಕಾಲಿದ್ದರು. 2013 ರಾಜಕೀಯಕ್ಕೆ ಪ್ರವೇಶಿಸಿದ್ದರು. Weekend With Ramesh ವೇದಿಕೆಯಲ್ಲಿ ತಮ್ಮ ರಾಜಕೀಯ ಜೀವನ ನೆನಪಿಸಿಕೊಂಡ ರಮ್ಯಾ, ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ. ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಸಮಯವಾಗಿತ್ತು. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದೆ. ಮಂಡ್ಯ ಜನರ ಪ್ರೀತಿಯನ್ನು, ಅವರು ನೀಡಿದ ಧೈರ್ಯವನ್ನು ಮರೆಯುವಂತಿಲ್ಲ ಎಂದರು. ತಂದೆ ಕಳೆದುಕೊಂಡು ದುಃಖದಲ್ಲಿದ್ದ ತಮಗೆ ರಾಹುಲ್ ಗಾಂಧಿಯವರು (Rahul Gandhi) ಮಾಡಿದ ಸಹಾಯವನ್ನು (Help) ಸಹ ರಮ್ಯಾ ನೆನಪಿಸಿಕೊಂಡರು.
Advertisement
Advertisement
ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೇಯವರು ನನ್ನ ತಂದೆ, ಮೂರನೇ ಅವರು ರಾಹುಲ್ ಗಾಂಧಿ ಎಂದು ಹೇಳಿಕೊಂಡು ರಮ್ಯಾ ಗದ್ಗದಿತರಾದರು. ನಾನು ಸುಳ್ಳು ಹೇಳಲ್ಲ. ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ತುಂಬಾ ರಾಹುಲ್ ಗಾಂಧಿ ಸಹಾಯ ಮಾಡಿದ್ರು. ಸಾವು ಅಂದ್ರೇನು ಬದುಕು ಅಂದ್ರೇನು ನಾವು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಮೂರನೇ ಪ್ರಭಾವಶಾಲಿ ಎಂದು ರಾಹುಲ್ ಗಾಂಧಿ ಬಗ್ಗೆ ರಮ್ಯಾ ಮಾತನಾಡಿದ್ದರು.
Advertisement
ಇದೀಗ ಮತ್ತೆ ರಮ್ಯಾ ಸಿನಿಮಾರಂಗ ಮತ್ತು ರಾಜಕೀಯ ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ʻಉತ್ತರಾಕಾಂಡʼ ಸಿನಿಮಾ ಮೂಲಕ ಡಾಲಿಗೆ ನಾಯಕಿಯಾಗಿ ರಮ್ಯಾ ಕಂಬ್ಯಾಕ್ ಮಾಡ್ತಿದ್ದಾರೆ.