ಪುನೀತ್ ರಾಜ್ ಕುಮಾರ್ ಸಿನಿಮಾ ಮೂಲಕವೇ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದವರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya). ಹಾಗಾಗಿ ಡಾ.ರಾಜ್ ಕುಟುಂಬದ ಬಗ್ಗೆ ರಮ್ಯಾಗೆ ವಿಶೇಷ ಗೌರವ. ಅದರಲ್ಲೂ ಅಪ್ಪು ಕಂಡರೆ ಎಲ್ಲಿಲ್ಲದ ಅಭಿಮಾನಿ. ಹಾಗಾಗಿ ಪದೇ ಪದೇ ಅಪ್ಪು ಜೊತೆ ನಟಿಸುವ ಮಾತುಗಳನ್ನು ಅಪ್ಪು (Appu) ಕಾಲಾನಂತರವೂ ರಮ್ಯಾ ಮಾತನಾಡುತ್ತಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ (Puneeth Rajkumar) ಕಂಡ ಕನಸ್ಹೊಂದನ್ನು ರಮ್ಯಾ ಹಂಚಿಕೊಂಡಿದ್ದಾರೆ.
Advertisement
ರಾಜ್ ಕುಮಾರ್ (Rajkumar) ಮತ್ತು ಲಕ್ಷ್ಮಿ (Lakshmi) ಅಭಿನಯದ ಸೂಪರ್ ಹಿಟ್ ‘ನಾ ನಿನ್ನ ಮರೆಯಲಾರೆ’ (Naa Ninna Mareyalare) ಚಿತ್ರವನ್ನು ರಿಕ್ರಿಯೇಟ್ ಮಾಡಲು ಬಯಸಿದ್ದರಂತೆ ಪುನೀತ್. ಈ ವಿಷಯವನ್ನು ರಮ್ಯಾ ಅವರಿಗೂ ತಿಳಿಸಿದ್ದರಂತೆ. ಡಾ.ರಾಜ್ ಮಾಡಿದ್ದ ಪಾತ್ರವನ್ನು ಅಪ್ಪು, ಲಕ್ಷ್ಮಿ ಅವರು ಮಾಡಿದ್ದ ಪಾತ್ರವನ್ನು ರಮ್ಯಾ ಮಾಡಬೇಕು ಎಂದು ಬಯಸಿದ್ದರಂತೆ. 1976ರಲ್ಲಿ ತೆರೆಕಂಡ ನಾ ನಿನ್ನ ಮರೆಯಲಾರೆ ಸಿನಿಮಾ ಇಂದಿಗೂ ಪ್ರೇಕ್ಷಕರ ಫೆವರೆಟ್ ಪಟ್ಟಿಯಲ್ಲಿದೆ. ಹಾಗಾಗಿ ಈ ಸಿನಿಮಾವನ್ನು ಮತ್ತೆ ತೆರೆಗೆ ತರುವ ಹಂಬಲ ಪುನೀತ್ ಅವರಿಗೆ ಇತ್ತು ಎಂದಿದ್ದಾರೆ ರಮ್ಯಾ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ
Advertisement
Advertisement
ಅಪ್ಪು ಅಗಲಿಕೆಗೂ ಮುನ್ನ ರಮ್ಯಾ ಜೊತೆ ಮಾತನಾಡಿದ್ದರಂತೆ. ಈ ವಿಷಯವನ್ನು ಸ್ವತಃ ಅವರೇ ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದಾಗ ತಿಳಿಸಿದ್ದರು. ತಮ್ಮ ಹೊಸ ಸಿನಿಮಾದಲ್ಲಿ ನೀವು ನಟಿಸಬೇಕು ಅಂತ ರಮ್ಯಾ ಅವರಿಗೆ ಹೇಳಿದ್ದರಂತೆ. ಅತೀ ಶೀಘ್ರದಲ್ಲೇ ನಾವು ಭೇಟಿ ಆಗೋಣ ಎಂದೂ ಮಾತನಾಡಿದ್ದರಂತೆ. ಆದರೆ, ಇಷ್ಟು ಬೇಗ ಅವರು ನಮ್ಮನ್ನು ಅಗಲುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಆವತ್ತು ರಮ್ಯಾ ಭಾವುಕರಾಗಿಯೇ ನುಡಿದಿದ್ದರು.
Advertisement
ಅಪ್ಪು ಅವರ ಹೊಸ ಸಿನಿಮಾದ ಜೊತೆಗೆ ನಾ ನಿನ್ನ ಮರೆಯಲಾರೆ ಚಿತ್ರಕ್ಕೂ ರಮ್ಯಾ ನಾಯಕಿಯಾಗಿ ನಟಿಸುವ ಮೂಲಕ ಮತ್ತೆ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಬೇಕಿತ್ತು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ರಮ್ಯಾ ಮತ್ತೆ ನಟಿಸಬೇಕು ಎನ್ನುವುದು ಪುನೀತ್ ಕನಸಾಗಿದೆ. ಅದನ್ನು ಆದಷ್ಟು ಬೇಗ ರಮ್ಯಾ ಈಡೇರಿಸುತ್ತಾರಂತೆ. ಸದ್ಯ ನಾಯಕಿಯಾಗಿ ಸಿನಿಮಾ ರಂಗಕ್ಕೆ ರಮ್ಯಾ ಪ್ರವೇಶ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಟಿಯಾಗಿ ಬರುತ್ತಾರೆ ಎನ್ನುವ ವಿಶ್ವಾಸ ಅಭಿಮಾನಿಗಳದ್ದು.