ಬೆಂಗಳೂರು: ಕರ್ನಾಟಕ ಚುನಾವಣಾ ರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ನೇರವಾಗಿ ರಾಹುಲ್ ಗಾಂಧಿ ಸವಾಲು ಹಾಕಿದ್ರು. ರಾಹುಲ್ ಗಾಂಧಿ ಚೀಟಿ ಇಲ್ಲದೇ ಕರ್ನಾಟಕ ಸರ್ಕಾರದ ಸಾಧನೆಯನ್ನು 15 ನಿಮಿಷ ಭಾಷಣ ಮಾಡಲಿಕ್ಕೆ ಆಗುತ್ತಾ? ವಿಶ್ವೇಶ್ವರಯ್ಯ ಹೆಸರನ್ನು 5 ಬಾರಿ ಸ್ಪಷ್ಟವಾಗಿ ಹೇಳಲು ಸಾಧ್ಯವೇ ಎಂದು ಮೋದಿ ಬಹಿರಂಗ ಸವಾಲು ಹಾಕಿದ್ದರು.
Advertisement
ರಮ್ಯಾ ಉತ್ತರ: ಕಾಂಗ್ರೆಸ್ ಸಾಮಾಜಿಕ ಜಾಲತಾಗಳ ಮುಖ್ಯಸ್ಥೆ ರಮ್ಯಾ, ನೇರವಾಗಿ ಮೋದಿಯವರ ಭಾಷಣದ ತುಣುಕುಗಳನ್ನು ಬಳಸಿ ಕಾಲೆಳೆದಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ನನಗೆ ಮೋದಿ ಅವರ ಜೊತೆ ಮಾತನಾಡಲು 15 ನಿಮಿಷಗಳ ಕಾಲಾವಕಾಶ ನೀಡಿ ರಾಫೆಲ್ ಮತ್ತು ನೀರವ್ ಮೋದಿ ಬಗ್ಗೆ ಮಾತನಾಡ್ತೇನೆ. ನನ್ನ ಪ್ರಶ್ನೆಗಳಿಗೆ ಮೋದಿ ನನ್ನ ಮುಂದೆ ನಿಲ್ಲೋದಕ್ಕೆ ಆಗಲ್ಲ ಅಂತಾ ಹೇಳಿರುವ ಕ್ಲಿಪ್ ಜೊತೆಗೆ ಮೋದಿಯವರ ಭಾಷಣದ ವಿಡಿಯೋ ಸೇರಿಸಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
Advertisement
Amazing response from @narendramodi to @RahulGandhi ‘s 15 min debate in parliament challenge #RahulDaresModi pic.twitter.com/XU9At6yHXo
— Ramya/Divya Spandana (@divyaspandana) May 2, 2018
Advertisement
ಕಾಂಗ್ರೆಸ್ ಟ್ವಟ್ಟರ್ ಖಾತೆಯಲ್ಲಿ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಇಲ್ಲಿಯೂ ಸಹ ಮೋದಿಯವರ ಭಾಷಣದ ತುಣುಕುಗಳನ್ನೇ ಬಳಸಿ ಕಾಲೆಳೆದಿದ್ದಾರೆ. ಮಂಗಳವಾರ ಮೋದಿ ತಮ್ಮ ಭಾಷಣದಲ್ಲಿ ನಾವು ಒಂದು ಒಳ್ಳೆಯ ಬಟ್ಟೆ ಸಹ ಹಾಕಲ್ಲ ಅಂದಿರುವ ಹೇಳಿಕೆಯನ್ನು ಬಳಸಲಾಗಿದೆ. ಈ ಹೇಳಿಕೆಯ ಜೊತೆಗೆ ಹೈಫೈ ಬಟ್ಟೆ ತೊಟ್ಟಿರುವ ಮೋದಿಯವರ ಫೋಟೋ ಹಾಗು ಅವುಗಳ ಬೆಲೆಯನ್ನು ತೋರಿಸಲಾಗಿದೆ. ಈ ವಿಡಿಯೋಗೆ 1974ರಲ್ಲಿ ತೆರೆಕಂಡ ‘ಸಗಿನಾ’ ಸಿನಿಮಾದ ಕಿಶೋರ್ ಕುಮಾರ್ ಹಾಡಿರುವ ದಿಲೀಪ್ ನಟನೆಯ ‘ಸಾಲಾ ಮೈ ತೋ ಸಾಬ್ ಬನ್ ಗಯಾ’ ಹಾಡನ್ನು ಬಳಸಿಕೊಳ್ಳಲಾಗಿದೆ.
Advertisement
ಒಟ್ಟಿನಲ್ಲಿ ಕರ್ನಾಟಕ ರಾಜಕೀಯ ಕುರುಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
The Emperor's new clothes. #MakeOverDiaries pic.twitter.com/ErFFlxnBoP
— Congress (@INCIndia) May 1, 2018