ನಟಿ ರಮ್ಯಾ (Ramya) ಸಾವಿನ ಬಗ್ಗೆ ಸುಳ್ಳು ಸುದ್ದಿಗೆ ಸ್ನೇಹಿತೆ ಧನ್ಯಾ ರಾಜೇಂದ್ರನ್ (Dhanya Rajedran) ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಸಾವಿನ ಬಗ್ಗೆ ಸುಳ್ಳು ಹಬ್ಬಿದಾಗ ಆಕೆಗೆ ಕಾಲ್ ಮಾಡಿದೆ. ರಮ್ಯಾ ಕ್ಷೇಮವಾಗಿದ್ದಾರೆ. ಗಾಬರಿ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ರಾಕಿಭಾಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್
ರಮ್ಯಾ (Ramya) ಸಾವಿನ ಬಗ್ಗೆ ಸುಳ್ಳು ಹಬ್ಬಿದಾಗ ಆತಂಕಗೊಂಡೆ, ಆಕೆಗೆ ಕರೆ ಮಾಡಿದೆ. ಮೊದಲ ಬಾರಿ ರಿಂಗ್ ಆದಾಗ ರಮ್ಯಾ ರಿಸೀವ್ ಮಾಡಲಿಲ್ಲ. ಬಳಿಕ ಕರೆಗೆ ರಮ್ಯಾ ಸಿಕ್ಕಿದ್ದರು. ಈ ತರಹದ ರೂಮರ್ಸ್ ಹಬ್ಬಿಸಿದ್ರು ಎಂದು ಸಿಟ್ಟಾದ್ರು. ಬಳಿಕ ನಾನು ಆರೋಗ್ಯವಾಗಿದ್ದೇನೆ ಎಂದು ರಮ್ಯಾ ತಿಳಿಸಿದ್ದರು. ಸದ್ಯದಲ್ಲೇ ರಮ್ಯಾ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಸ್ನೇಹಿತೆ ಧನ್ಯಾ ಸ್ಪಷ್ಟನೆ ನೀಡಿದ್ದಾರೆ.
Just spoke to @divyaspandana. She is in Geneva, was sleeping peacefully till calls came in. Whoever the irresponsible person was who tweeted this and the news organisations that put it out as news flash, shame on you. #DivyaSpandana
— Dhanya Rajendran (@dhanyarajendran) September 6, 2023
ವಿದೇಶ ಪ್ರವಾಸದಲ್ಲಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕ್ಷೇಮವಾಗಿದ್ದಾರೆ. ನಟಿಯ ಆರೋಗ್ಯದ(Health) ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ಅವರ ಆಪ್ತರು ಮನವಿ ಮಾಡಿಕೊಂಡಿದ್ದಾರೆ. ರಮ್ಯಾ ಅವರು ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದಂತೆ ರಮ್ಯಾ ಸ್ನೇಹಿತೆಯರು ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಆರೋಗ್ಯವಾಗಿದ್ದಾರೆ, ಕ್ಷೇಮವಾಗಿದ್ದಾರೆ. ನಾಳೆಯೇ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಕ್ಲ್ಯಾರಿಟಿ ನೀಡಿದ್ದಾರೆ.
ನಟಿ ರಮ್ಯಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ತಮಿಳು ಕಿರುತೆರೆ ನಟಿ ರಮ್ಯಾಗೆ ಹೃದಯಾಘಾತವಾಗಿದೆ. ಈ ಸುದ್ದಿಗೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಫೋಟೋ ಹಾಕಿ ನ್ಯೂಸ್ ಮಾಡಲಾಗಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಕೂಡಲೇ ರಮ್ಯಾ ಆಪ್ತರು ನಟಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿಯೂ ರಮ್ಯಾ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂಬ ಪೋಸ್ಟ್ ಅನ್ನು ವೈರಲ್ ಮಾಡಲಾಗುತ್ತಿದೆ. ಸದ್ಯ ರಮ್ಯಾ ಬಗೆಗಿನ ಸುಳ್ಳು ಸುದ್ದಿ ಕೇಳಿ ಶಾಕ್ ಆಗಿದ್ದ ಫ್ಯಾನ್ಸ್ ಈಗ ನಿರಾಳವಾಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]