‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ವಿವಾದಕ್ಕೆ ಸಂಬಂಧಿಸಿದಂತೆ ಇಂದು (ಜ.7) ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿದ ಬಳಿಕ ರಮ್ಯಾ (Ramya) ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ, ರಾಜಕೀಯದ ಬಗ್ಗೆ ನಟಿ ಮಾತನಾಡಿದ್ದಾರೆ. ಈ ವೇಳೆ, ಮದುವೆ ಬಗ್ಗೆ ಕೇಳಿದ್ದಕ್ಕೆ ರಮ್ಯಾ ನಾಚಿ ನೀರಾಗಿದ್ದಾರೆ.
Advertisement
ಮಾಧ್ಯಮಕ್ಕೆ ಮಾತನಾಡಿದ ನಟಿ, ಮದುವೆ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾಗಿದ್ದಾರೆ. ಅದಕ್ಕೇನು ಪ್ರತಿಕ್ರಿಯೆ ನೀಡದೇ ಅಲ್ಲಿಂದ ರಮ್ಯಾ ತೆರಳಿದ್ದಾರೆ. ಇದನ್ನೂ ಓದಿ:ಈ ಪ್ರಕರಣ ಕೋರ್ಟ್‌ನಲ್ಲಿದೆ ಇದರ ಬಗ್ಗೆ ಮಾತನಾಡಲ್ಲ: ರಮ್ಯಾ
Advertisement
Advertisement
ಕೋರ್ಟ್ ವಿಚಾರಣೆಯ ಬಳಿಕ ರಮ್ಯಾ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಕೆಲ ದಾಖಲೆಗಳನ್ನು ನೀಡಲು ಹೇಳಿತ್ತು. ಅವರು ಕೇಳಿದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ನೇರವಾಗಿ ಬಂದು ಕೊಡೋಕೆ ಹೇಳಿದ್ದರು. ಹಾಗಾಗಿ ವಿಚಾರಣೆಗೆ ಬಂದಿದ್ದೇನೆ. ಈ ಪ್ರಕರಣ ಕೋರ್ಟ್‌ನಲ್ಲಿರುವ ಕಾರಣಕ್ಕೆ ಹೆಚ್ಚೇನು ಮಾತನಾಡಲ್ಲ ಎಂದು ಮಾತನಾಡಿದ್ದಾರೆ. ಇದೇ ವೇಳೆ, ಮತ್ತೆ ಸಿನಿಮಾ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಬರುತ್ತೇನೆ. ರಾಜಕೀಯಕ್ಕೆ ಸದ್ಯಕ್ಕೆ ಬರುವ ಆಲೋಚನೆ ಇಲ್ಲ ಎಂದು ಮಾತನಾಡಿದ್ದಾರೆ.
Advertisement
ಇನ್ನೂ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ.