ಮಂಡ್ಯ: ಮಾಜಿ ಸಂಸದೆ, ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ರಾಜ್ಯ ರಾಜಕಾರಣಕ್ಕೆ ಜಬರ್ದಸ್ತ್ ಎಂಟ್ರಿ ಕೊಡಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಈಗಾಗಲೇ 2018ರ ಲೋಕಸಭಾ ಚುನಾವಣೆಗೆ ತಾಲೀಮು ಆರಂಭಿಸಿದ್ದಾರೆ.
ಸಂಸದೆ ರಮ್ಯಾ ಮಂಡ್ಯ ಹಾಗೂ ಮೈಸೂರು ಎರಡು ಲೋಕಸಭಾ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿರುವುದು ವಿಶೇಷ ಸಂಗತಿಯಾಗಿದೆ. ಈಗಾಗಲೇ ಈ ಎರಡು ಲೋಕಸಭಾ ಕ್ಷೇತ್ರಗಳ ಸರ್ವೆ ಕಾರ್ಯ ಮಾಡಿಸಿ ರಿಪೋರ್ಟ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement
ಇತ್ತೀಚೆಗೆ ವಿವಾದಗಳಿಂದ ಸುದ್ದಿ ಆಗುತ್ತಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಅಖಾಡಕ್ಕೆ ಇಳಿಯಲು ಸಹಾ ರಮ್ಯಾ ಚಿಂತನೆ ನಡೆಸಿದ್ದಾರೆ. ಮಂಡ್ಯ ಅಥವಾ ಮೈಸೂರು ಎರಡರಲ್ಲಿ ಒಂದು ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅಖಾಡಕ್ಕೆ ಇಳಿಯುವುದು ಖಚಿತವಾಗಿದೆ.
Advertisement
ಎರಡು ಕ್ಷೇತ್ರಗಳ ಸಮೀಕ್ಷಾ ವರದಿ ರಮ್ಯಾ ಕೈ ಸೇರಿದ್ದು, ಮಂಡ್ಯದಿಂದಲೇ ಅಖಾಡಕ್ಕೆ ಇಳಿದು ಅಲ್ಲಿಯ ಜನರ ಋಣ ತೀರಿಸುತ್ತಾರಾ? ಇಲ್ಲಾ ಮೈಸೂರಿಂದ ಅಖಾಡಕ್ಕೆ ಇಳಿದು ಸಂಸದ ಪ್ರತಾಪ್ ಸಿಂಹರನ್ನು ಸೋಲಿಸುತ್ತಾರಾ ಎಂಬುದು ಕುತೂಹಲ ಸಂಗತಿಯಾಗಿದೆ. ಆದ್ದರಿಂದ 2019ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಮಂಡ್ಯ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ಸರ್ವೆ ಮಾಡಿಸಿದ್ದಾರೆ. ಮೈಸೂರು ಹಾಗೂ ಮಂಡ್ಯ ಎರಡು ಕ್ಷೇತ್ರಗಳಲ್ಲಿಯೂ ರಮ್ಯಾಗೆ ಪಾಸಿಟಿವ್ ರಿಸಲ್ಟ್ ಸಿಕ್ಕಿದ್ದು, ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಅಖಾಡಕ್ಕೆ ಇಳಿತಾರಾ ಅನ್ನೋ ಕುತೂಹಲ ಮೂಡಿಸಿದೆ.