ತೆಲುಗು (Telugu films) ನಟಿ ರಮ್ಯಾ ಪಶುಪಿಲೇತಿ (Ramya Pasupuleti) ಥೈಲ್ಯಾಂಡ್‌ನ ಕೊಹ್ ಸಮುಯಿ ಬೀಚ್‌ನಲ್ಲಿ (Koh Samui Beach) ಫೋಟೋಶೂಟ್ ಮಾಡಿ ಹಂಚಿಕೊಂಡಿರುವ ಹಸಿಬಿಸಿ ಫೋಟೋಗಳು ಪಡ್ಡೆಹುಡುಗರ ಕನಸಲ್ಲಿ ಸುನಾಮಿ ಎಬ್ಬಿಸಿವೆ!
ಕಳೆದ ಐದಾರು ವರ್ಷಗಳಿಂದ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ ರಮ್ಯಾ, ಕಳೆದ ವರ್ಷ ತೆರೆಗೆ ಬಂದ ʻಮಾರುತಿ ನಗರ ಸುಬ್ರಮಣ್ಯಂʼ ಚಿತ್ರದಿಂದ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯ ಆಗಿದ್ದರು. ನಟಿಯ ಗ್ಲಾಮರ್‌ಗೆ ಸಾಕಷ್ಟು ಮನ್ನಣೆ ಸಿಕ್ಕಿಲ್ಲ. ಆದರೂ ತಮ್ಮ ಬ್ಯೂಟಿಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ನಿರ್ದೇಶಕರಿಗೆ ನಾನು ಸಂಪೂರ್ಣ ಶರಣಾಗ್ತೇನೆ – ಕೇತಿಕಾ ಶರ್ಮಾ ಹೀಗೆ ಹೇಳಿದ್ದೇಕೆ ಗೊತ್ತಾ?
ಬಿಡುವಿನ ವೇಳೆ ಬೀಚ್‌ಗೆ ತೆರಳಿದ್ದ ರಮ್ಯಾ, ಸಕತ್ ಹಾಟ್ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡು ಪಡ್ಡೆಹುಡುಗರಿಗೆ ಗ್ಲಾಮರ್ ಟ್ರೀಟ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ನಟಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳಿಗಾಗಿಯೇ ಸಕತ್ ಗ್ಲಾಮರ್ ಆಗಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.
ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ವಿಶ್ವಂಭರ ಚಿತ್ರದಲ್ಲಿ ಸಹೋದರಿಯ ಪಾತ್ರದಲ್ಲಿ ನಟಿಸಲು ರಮ್ಯಾ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಇನ್ನೂ ಎರಡು ಜನಪ್ರಿಯ ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ ಎಂದು ವರದಿಯಾಗಿದೆ.
ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ರಮ್ಯಾ , 2018 ರಲ್ಲಿ ʻಹುಷಾರುʼ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 2021ರಲ್ಲಿ ʻಪಂಚಾಕ್ಷರಿʼ ಮತ್ತು ʻಕಮಿಟ್‌ಮೆಂಟ್ʼ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2024 ರಲ್ಲಿ, ಅವರ ಚಿತ್ರ ʻಮಾರುತಿ ನಗರ ಸುಬ್ರಹ್ಮಣ್ಯಂʼ ದೊಡ್ಡ ಯಶಸ್ಸನ್ನು ಕಂಡಿತ್ತು. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಮಿಂಚಿದ ವೈಷ್ಣವಿ – ಕೊಲ್ತಾಳಲ್ಲಪ್ಪೋ… ಅಂದ್ರು ನೆಟ್ಟಿಗರು