ಬ್ಯಾಂಕಾಕ್‌ಗೆ ಹಾರಿದ ಮೋಹಕ ತಾರೆ ರಮ್ಯಾ: ಫೋಟೋ ವೈರಲ್

ಚಂದನವನದ ಚೆಂದದ ನಟಿ ರಮ್ಯಾ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಅಗಿದ್ದಾರೆ. ಮತ್ತೆ ಸಿನಿಮಾಗೆ ಕಂಬ್ಯಾಕ್ ಮಾಡಲು ತೆರೆಮರೆಯಲ್ಲಿ ಸಖತ್ ಕಸರತ್ತು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಈಗ ಸ್ನೇಹಿತೆಯರೊಂದಿಗೆ ನಟಿ ರಮ್ಯಾ ಬ್ಯಾಂಕಾಕ್‌ಗೆ ಹಾರಿದ್ದಾರೆ. ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.
`ಅಭಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ರಮ್ಯಾ, ಸಾಕಷ್ಟು ಹಿಟ್ ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದರು. ಕಡೆಯದಾಗಿ ʻನಾಗರಹಾವುʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಜಕೀಯ ರಂಗದಲ್ಲಿ ಬ್ಯುಸಿಯಾದ್ದರು. ಸಿನಿಮಾ ಮತ್ತು ರಾಜಕೀಯ ಎರಡು ರಂಗದಿಂದಲೂ ಅಂತರ ಕಾಯ್ದುಕೊಂಡು ಸೈಲೆಂಟ್ ಆಗಿದ್ದರು. ಈಗ ಮತ್ತೆ ರಮ್ಯಾ ಚೈತ್ರ ಕಾಲ ಶುರುವಾಗಿದೆ. ಸಿನಿಮಾ ಸಮಾರಂಭಗಳಿಗೆ ಕಾಣಿಸಿಕೊಳ್ಳುತ್ತಾ ಹೊಸ ತಂಡಕ್ಕೆ ಸಾಥ್ ನೀಡುತ್ತಿರುತ್ತಾರೆ. ಇದೀಗ ರಮ್ಯಾ ವಿದೇಶಕ್ಕೆ ಹಾರಿದ್ದಾರೆ. ನಟಿಯ ನಯಾ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆಷ್ಟೇ ನಟಿ ಕಾವ್ಯಾ ಮತ್ತು ವರುಣ್ ಗೌಡ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಕೊಂಚ ಬ್ರೇಕ್ ತೆಗೆದುಕೊಂಡು ಬ್ಯಾಂಕಾಕ್‌ಗೆ ಹಾರಿದ್ದಾರೆ. ತಮ್ಮ ಚೆಂದದ ಫೋಟೋವೊಂದು ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ರಮ್ಯಾ ಲುಕ್ ನೋಡಿ ಅಯ್ಯೋ ದೃಷ್ಟಿ ತೆಗೆಸಿಕೊಳ್ಳಿ ಅಂತಾ ಕಾಮೆಂಟ್ ಮಾಡ್ತಿದ್ದಾರೆ.ಇದನ್ನೂ ಓದಿ:`ವಿ ಲವ್ ಯೂ’ ಎಂದ ಅಭಿಮಾನಿಗೆ ದೀಪಿಕಾ ಖಡಕ್ ರಿಯಾಕ್ಷನ್
View this post on Instagram
ಇದೀಗ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ರಮ್ಯಾ, ಭಿನ್ನ ಕಥೆಯ ಮೂಲಕ ಕಮ್‌ಬ್ಯಾಕ್ ಆಗಲು ರೆಡಿಯಾಗಿದ್ದಾರೆ. ಸದ್ಯದಲ್ಲೇ ಅನೌನ್ಸ್ ಕೂಡ ಮಾಡಲಿದ್ದಾರೆ.
Live Tv