ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಮ್ಯಾ ಸ್ನೇಹಿತರ ಜೊತೆಗೆ ಮೆಕ್ಸಿಕೋ ಪ್ರವಾಸವನ್ನು ಮಾಡುತ್ತಿದ್ದಾರೆ. ಅಲ್ಲಿಯ ಸುಂದರತಾಣಗಳಲ್ಲಿ ಎಂಜಾಯ್ ಮಾಡುತ್ತಿರುವ ಕೆಲವು ಫೋಟೋಗಳಿರವ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ರಮ್ಯಾ ಇತ್ತೀಚೆಗೆ ಮೆಕ್ಸಿಕೋ ಟ್ರಿಪ್ ಮುಗಿಸಿ ಬಂದಿದ್ದಾರೆ. ಟ್ರಿಪ್ನ ಫೋಟೋ, ವೀಡಿಯೋಗಳನ್ನು ರಮ್ಯಾ ಎಡಿಟ್ ಮಾಡಿ, ನಿನ್ನ ಗುಂಗಲ್ಲೇ ನನ್ನೇ ಮರೆತೆ ನಾ ಎಂಬ ಕನ್ನಡ ಹಾಡನ್ನು ಸೇರಿಸಿದ್ದಾರೆ. ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಟ್ರಿಪ್ ಟೈಮ್ನಲ್ಲಿ ರಮ್ಯಾ ಸಖತ್ ಎಂಜಾಯ್ ಮಾಡಿರುವುದನ್ನು ಫೋಟೋಗಳಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: CDS ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ- ಪತ್ನಿ ಸೇರಿ11 ಮಂದಿ ಸಾವು
View this post on Instagram
ರಮ್ಯಾ ಇತ್ತೀಚೆಗೆ ಮೆಕ್ಸಿಕೋ ಟ್ರಿಪ್ ಮುಗಿಸಿ ಬಂದಿದ್ದಾರೆ. ಅಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಟ್ರಿಪ್ನ ವೀಡಿಯೋವನ್ನು ರಮ್ಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್ನಲ್ಲಿ ರಿಲ್ಯಾಕ್ಸ್ ಮಾಡುವ ಫೋಟೋಗಳನ್ನು ಹಾಕಿದ್ದಾರೆ. ಸಮುದ್ರದ ನೀರಿನಲ್ಲಿ ರಮ್ಯಾ ಈಜು ಮಾಡುತ್ತಿರುವ ಫೋಟೋ ಕೂಡ ಇದರಲ್ಲಿ ಇದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದಯವಿಟ್ಟು ಸಿನಿಮಾ ರಂಗಕ್ಕೆ ವಾಪಸ್ ಬನ್ನಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್
ರಮ್ಯಾ ಫುಲ್ ಟೈಮ್ ಚಿತ್ರರಂಗ ತೊರೆದು ದಶಕಗಳೇ ಕಳೆದುಹೋಗಿದೆ. ರಾಜಕೀಯದಲ್ಲೂ ಅಷ್ಟು ಸಕ್ರಿಯವಾಗಿಲ್ಲ. ಆದರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.