ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತರಾಗಿರುವ ರಮ್ಯಾ, ಸಿನಿಮಾ ರಂಗದಿಂದ ದೂರವಾಗಿ ಎಂಟು ವರ್ಷಗಳು ಆಗಿವೆ. ಆದರೂ, ಅವರು ಸಿನಿಮಾ ರಂಗದಲ್ಲಿನ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಸಿನಿಮಾ ಮಾಡದೇ ಇದ್ದರೂ, ಇವತ್ತಿಗೂ ರಮ್ಯಾ ಸಿನಿಮಾ ರಂಗದ ಟಾಪ್ ಲಿಸ್ಟ್ ನಲ್ಲಿ ಇದ್ದಾರೆ. ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ರಮ್ಯಾ ಈಗಲೂ ನಾಲ್ಕನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.
ಖಾಸಗಿ ಸಂಸ್ಥೆಯು ನಡೆಸಿರುವ ಕನ್ನಡದ ಟಾಪ್ ನಟಿಯರ ಸಮೀಕ್ಷೆಯಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸ್ಥಾನ ದೊರೆತಿದ್ದರೆ, ಎರಡನೇ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಮೂರನೇ ಸ್ಥಾನದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಮ್ಯಾ ರಾರಾಜಿಸುತ್ತಿದ್ದು, ಈ ಖುಷಿಯನ್ನು ಅಭಿಮಾನಿಗಳ ಜೊತೆ ರಮ್ಯಾ ಹಂಚಿಕೊಂಡಿದ್ದಾರೆ. ತಮಗಿಂತಲೂ ಮೊದಲ ಸ್ಥಾನದಲ್ಲಿರುವ ಮೂವರೂ ನಟಿಯರಿಗೆ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್
ಕಳೆದ ಎಂಟು ವರ್ಷಗಳಿಂದ ನಾನು ಸಿನಿಮಾ ರಂಗದಿಂದ ದೂರವಿದ್ದರೂ, ಇವತ್ತಿಗೂ ಅಭಿಮಾನಿಗಳು ತಮ್ಮನ್ನು ಪ್ರೀತಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತ ಪಡಿಸಿರುವ ರಮ್ಯಾ, ಇತರ ನಟಿಯರಿಗೂ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಮ್ಯಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದು, ನೇರವಾಗಿ ಸಿನಿಮಾದಲ್ಲಿ ನಟಿಸದೇ ಇದ್ದರೂ, ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಈ ಮೂಲಕ ಮತ್ತೆ ತಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ.