ತುಮಕೂರು: ರಮ್ಯಾ ಒಬ್ಬಳು ವಯ್ಯಾರಿ. ಆಕೆ ಒಬ್ಬ ನಟಿ, ವಯ್ಯಾರಿ ನಟನೆ ಮಾಡೋದಷ್ಟೆ ಅವಳ ಕೆಲಸ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ವ್ಯಂಗ್ಯ ಮಾಡಿದ್ದಾರೆ.
ರಮ್ಯಾ ಅವರ ಮಾತಿಗೆ ಮಹತ್ವ ಕೊಟ್ಟರೆ ಇಡೀ ದೇಶದ 120 ಕೋಟಿ ಜನರಿಗೆ ಅವಮಾನ ಮಾಡಿದಂತೆ. ದೇಶಕ್ಕೆ ಆಯಮ್ಮನ ಕೊಡುಗೆ ಏನೂ ಇಲ್ಲ. ಆಕೆ ವಯ್ಯಾರದಲ್ಲಿ ಈ ಸಮಾಜಕ್ಕೆ, ದೇಶಕ್ಕೆ ಬೇಕಾದ ಯಾವ ಕೆಲಸವನ್ನು ಮಾಡಿಲ್ಲ ಎಂದು ಅವರು ಕಿಡಿಕಾರಿದರು. ಇದನ್ನೂ ಓದಿ: ಫೇಕ್ ಖಾತೆ ಹೊಂದಿದ್ರೆ ತಪ್ಪಲ್ಲ : ರಮ್ಯಾ ಮೇಡಂ ಪಾಠದ ವಿಡಿಯೋ ಫುಲ್ ವೈರಲ್
ಪ್ರಧಾನಿ ಮೋದಿ ಬೆಂಗಳೂರು ಭಾಷಣವನ್ನು ಲೇವಡಿ ಮಾಡಿ ರಮ್ಯಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದ ಇರುವಾಗಲೇ ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡುವ ವೇಳೆ ಫೇಕ್ ಖಾತೆ ಓಪನ್ ಮಾಡಿದ್ದರೆ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ರಮ್ಯಾ ಪಾಠ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಇದನ್ನೂ ಓದಿ: ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು