ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

Public TV
2 Min Read
FotoJet 2 24

ತ್ತೀಚಿನ ದಿನಗಳಲ್ಲಿ ರಮ್ಯಾ ಜೊತೆ ಓಡಾಡುತ್ತಿರುವ ಮತ್ತೊಂದು ಹೆಸರು ರಕ್ಷಿತ್ ಶೆಟ್ಟಿ ಅವರದ್ದು. ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡಿದ ಗಾಸಿಪ್ ಗೆ ಲೆಕ್ಕವಿಟ್ಟವರಿಲ್ಲ. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಹೆಸರು ಚಾಲ್ತಿಯಲ್ಲಿದೆ. ಇಬ್ಬರೂ ಪ್ರೀತಿಸ್ತಾ ಇದ್ದಾರೆ ಎನ್ನುವುದರಿಂದ ಹಿಡಿದು, ಒಟ್ಟಿಗೆ ಇನ್ನೇನು ಸಿನಿಮಾ ಮಾಡಲಿದ್ದಾರೆ ಎನ್ನುವಲ್ಲಿಗೆ ಗಾಸಿಪ್ ಹರಡಿಕೊಂಡಿತ್ತು. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

ramya 2

ಈ ಕುರಿತು ಮಾಧ್ಯಮವೊಂದರಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾತನಾಡಿದ್ದಾರೆ. ರಮ್ಯಾ ಮತ್ತು ತಮ್ಮ ಜೊತೆಗಿನ ಬಾಂಧವ್ಯವನ್ನು ಅವರು ತೆರೆದಿಟ್ಟಿದ್ದಾರೆ. ಅಸಲಿಯಾಗಿ ಈವರೆಗೂ ರಮ್ಯಾ ಅವರನ್ನು ರಕ್ಷಿತ್ ಮುಖತಃ ಭೇಟಿ ಆಗದೇ ಇದ್ದರೂ, ಕಾಲೇಜು ದಿನಗಳಲ್ಲಿ ರಮ್ಯಾ ಮೇಲೆ ಅವರಿಗೆ ಕ್ರಶ್ ಆಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

rakshith shetty

ರಮ್ಯಾ ಹೆಸರಾಂತ ತಾರೆ. ಸಹಜವಾಗಿ ಕಾಲೇಜು ದಿನಗಳಲ್ಲಿ ಕ್ರಶ್ ಆಗಿಯೇ ಆಗುತ್ತದೆ. ನನಗಷ್ಟೇ ಅಲ್ಲ, ಅದೆಷ್ಟೋ ಹುಡುಗರಿಗೆ ರಮ್ಯಾ ಅವರ ಮೇಲೆ ಕ್ರಶ್ ಆಗಿದೆ. ಹಾಗೆಯೇ ನನಗೂ ಆಗಿತ್ತು. ಅಷ್ಟೇ, ಅದರ ಹೊರತಾಗಿ ಉಳಿದದ್ದೆಲ್ಲ ಶುದ್ಧ ನಾನ್ಸೆನ್ಸ್ ಎನ್ನುತ್ತಾರೆ ರಕ್ಷಿತ್ ಶೆಟ್ಟಿ. ನಾನು ಯಾವುದೇ ಹುಡುಗಿಯ ಜತೆ ಫೋಟೋ ಶೇರ್ ಮಾಡಿದರೂ, ಅವರೊಂದಿಗೆ ಸಂಬಂಧ ಕಟ್ಟಿ ಗಾಸಿಪ್ ಮಾಡುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ರಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

ramya 12

ರಮ್ಯಾ ಜೊತೆಗಿನ ಸಿನಿಮಾದ ಬಗ್ಗೆಯೂ ಮಾತನಾಡಿರುವ ರಕ್ಷಿತ್, ‘ಉಳಿದವರು ಕಂಡಂತೆ ಸಿನಿಮಾದಲ್ಲಿ ರಮ್ಯಾ ಅವರೇ ನಾಯಕಿ ಪಾತ್ರ ಮಾಡಬೇಕು ಎನ್ನುವುದು ನನ್ನಾಸೆ ಆಗಿತ್ತು. ಹಾಗಾಗಿ ಅವರಿಗೆ ಕಥೆ ಹೇಳಿದ್ದೆ. ಈ ಸಿನಿಮಾದ ಕಥೆಯು ನನಗೆ ಅರ್ಥವಾಗಲಿಲ್ಲ ಎಂದು ಹೇಳಿ ಒಪ್ಪಿಕೊಳ್ಳಲಿಲ್ಲ. ಆನಂತರ ಮತ್ತೆ ನಾನು ಅವರೊಂದಿಗೆ ಕೆಲಸ ಮಾಡಲಿಲ್ಲ. ಅವರ ಜೊತೆ ಕೆಲಸ ಮಾಡುವ ಆಸೆಯಿದೆ. ಆದರೆ, ಸದ್ಯಕ್ಕಲ್ಲ’ ಎಂದು ಮಾತನಾಡಿದ್ದಾರೆ.

Share This Article