ಕ್ರೇಜಿ ಕ್ವೀನ್ ರಕ್ಷಿತಾ (Rakshitha Prem) ಸಹೋದರ ರಾಣಾ (Raana) ಮದುವೆ ಆರತಕ್ಷತೆ ಫೆ.8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿದೆ. ಈ ಸಂಭ್ರಮದಲ್ಲಿ ಮೋಹಕತಾರೆ ರಮ್ಯಾ (Ramya) ಸ್ಟೈಲೀಶ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು
ರಾಣಾ ಹಾಗೂ ಫ್ಯಾಷನ್ ಡಿಸೈನರ್ ರಕ್ಷಿತಾಗೆ ಶುಭ ಕೋರಲು ರಮ್ಯಾ ಕೂಡ ಆರತಕ್ಷತೆಗೆ ಆಗಮಿಸಿದ್ದರು. ಒಂದು ಕ್ಷಣ ಮೋಹಕತಾರೆ ರಮ್ಯಾ ಎಂಟ್ರಿ ನೋಡಿ ಅನೇಕರು ದಂಗಾದರು.
ರಕ್ಷಿತಾ ಸಹೋದರನ ಆರತಕ್ಷತೆಯಲ್ಲಿ ಸ್ಲೀವ್‌ಲೆಸ್ ಬ್ಲೌಸ್‌ಗೆ ಕಪ್ಪು ಬಣ್ಣದ ಸೀರೆಯುಟ್ಟು ರಮ್ಯಾ ಮಿರ ಮಿರ ಅಂತ ಮಿಂಚಿದ್ದಾರೆ. ವಯಸ್ಸು 42 ವರ್ಷವಾಗಿದ್ರೂ ಬಳುಕುವ ಬಳ್ಳಿಯಂತೆ ರಮ್ಯಾ ಕಂಗೊಳಿಸಿದ್ದಾರೆ. ಅವರ ಫಿಟ್‌ನೆಸ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿದ್ರೂ ಕೂಡ ಇಂದಿಗೂ ರಕ್ಷಿತಾ ಹಾಗೂ ರಮ್ಯಾ ನಡುವಿನ ಅದೆಷ್ಟು ಚೆನ್ನಾಗಿದೇ ಎಂಬುದಕ್ಕೆ ರಾಣಾ ಆರತಕ್ಷತೆಯಲ್ಲಿ ಇಬ್ಬರೂ ಇದ್ದ ರೀತಿಯೇ ಸಾಕ್ಷಿಯಾಗಿದೆ. ರಕ್ಷಿತಾರನ್ನು ನೋಡ್ತಿದ್ದಂತೆ ರಮ್ಯಾ ತಬ್ಬಿಕೊಂಡಿದ್ದಾರೆ.
ರಕ್ಷಿತಾ ಹಾಗೂ ರಮ್ಯಾ ಒಂದೇ ಕಾಲಘಟ್ಟದಲ್ಲಿ ಸಿನಿಮಾ ರಂಗದಲ್ಲಿ ಮಿಂಚಿದವರು. ಪುನೀತ್‌ರಾಜ್‌ಕುಮಾರ್‌ಗೆ ನಾಯಕಿಯರಾಗಿ ಸದ್ದು ಮಾಡಿದವರು. ಇದನ್ನೂ ಓದಿ:ಕ್ರೇಜಿ ಕ್ವೀನ್ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್
2002ರಲ್ಲಿ ‘ಅಪ್ಪು’ ಸಿನಿಮಾದಲ್ಲಿ ರಕ್ಷಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2003ರಲ್ಲಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಅವರು ಮೊದಲ ಬಾರಿಗೆ ಬಣ್ಣದ ಹಚ್ಚಿದ್ದರು. ಪುನೀತ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡರು.
ರಮ್ಯಾ ಹಾಗೂ ರಕ್ಷಿತಾ ಇಬ್ಬರ ನಡುವೆಯೂ ಒಂದೊಳ್ಳೆಯ ಪೈಪೋಟಿ ಇತ್ತು. ಇನ್ನೂ 2006ರಲ್ಲಿ ‘ತನನಂ ತನನಂ’ ಸಿನಿಮಾದಲ್ಲಿ ಶ್ಯಾಮ್‌ಗೆ ನಾಯಕಿಯರಾಗಿ ರಮ್ಯಾ ಹಾಗೂ ರಕ್ಷಿತಾ ನಟಿಸಿದ್ದರು. ಕವಿತಾ ಲಂಕೇಶ್ ಅವರು ನಿರ್ದೇಶನ ಮಾಡಿದ್ದರು.
ಇನ್ನೂ ರಕ್ಷಿತಾ 2007ರಲ್ಲಿ ಡೈರೆಕ್ಟರ್ ಪ್ರೇಮ್ ಜೊತೆ ಮದುವೆಯಾದರು. ರಮ್ಯಾ ಸಿನಿಮಾ ಬಳಿಕ ಪಾಲಿಟಿಕ್ಸ್ ಎಂಟ್ರಿ ಕೊಟ್ಟಿದ್ದರು. ಪ್ರಸ್ತುತ ರಮ್ಯಾ ಅವರು ಸಿನಿಮಾ, ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.