ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

Public TV
1 Min Read
Benglauru Stampede Ramya Tweet

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಕಾಲುಳ್ತಿತ (Stampede) ಉಂಟಾಗಿ 10 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, ಈ ಬಗ್ಗೆ ನಟಿ ರಮ್ಯಾ (Ramya) ಎಕ್ಸ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಟೇಡಿಯಂನಲ್ಲಿ ಕಾಲುಳ್ತಿತದ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ ಅವರು, ಸಂಭ್ರಮಾಚರಣೆಯು ಯಾವ ರೀತಿ ದುಃಖಕರ ಸಂಗತಿಯಾಗಿ ಬದಲಾಯಿತು. ನಿಜಕ್ಕೂ ಇದು ಹೃದಯವಿದ್ರಾಕ ಘಟನೆ ಎಂದು ಬರೆದುಕೊಂಡು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚಿಗೆ ಜನ ಬಲಿಯಾಗಿದ್ದಾರೆ: ವಿಜಯೇಂದ್ರ ಆಕ್ರೋಶ

ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಯಡವಟ್ಟು ಸಂಭವಿಸಿ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ 10 ಮಂದಿ ಆರ್‌ಸಿಬಿ ಫ್ಯಾನ್ಸ್ ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

ಬೌರಿಂಗ್ ಆಸ್ಪತ್ರೆಯಲ್ಲಿ 5, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೃತಪಟ್ಟವರು ಯಲಹಂಕ ಮೂಲದ ಓರ್ವ ಯುವತಿ ಹಾಗೂ 6 ಯುವಕರು ಎಂದು ಗುರುತಿಸಲಾಗಿದೆ.

Share This Article