ಕಿರುತೆರೆಯ Weekend With Ramesh 5 ಕಾರ್ಯಕ್ರಮದ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ (Ramya) ಭಾಗವಹಿಸಿದ್ದರು. ಸಾಧಕರ ಸೀಟ್ ಮೇಲೆ ಕೂತಿದ್ದ ರಮ್ಯಾ ಅವರ ಸಾಧನೆಯನ್ನ ಎರಡು ಸಂಚಿಕೆಗಳಲ್ಲಿ ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಕನ್ನಡ ಮಾತನಾಡದೇ ಇಂಗ್ಲಿಷ್ ಬಳಸಿರುವುದಕ್ಕೆ ಸಖತ್ ಟ್ರೋಲ್ ಆಗಿದ್ದರು. ಇದೀಗ ನಟಿ ಮೌನ ಮುರಿದಿದ್ದಾರೆ. ತಾವು ಇಂಗ್ಲಿಷ್ ಮಾತನಾಡಿದ್ದು ಏಕೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ಅವರ ಸಂಚಿಕೆ ಪ್ರಸಾರ ಆದ್ಮೇಲೆ ಅತಿಯಾದ ಇಂಗ್ಲಿಷ್ ಬಳಕೆ ನೋಡಿದ ವೀಕ್ಷಕರು ನಮ್ಮ ಅಜ್ಜಿ, ನಮ್ಮ ತಾಯಿಗೆ ಇಂಗ್ಲಿಷ್ ಬರಲ್ಲ ಅಂತ ಟ್ರೋಲ್ ಮಾಡಲು ಆರಂಭಿಸಿದರು.
ಇದು ವೀಕೆಂಡ್ ವಿತ್ ರಮೇಶ್ ಇಂಗ್ಲಿಷ್ ವರ್ಷನ್. ಕನ್ನಡ ಸಬ್ ಟೈಟಲ್ ಆದರೂ ಹಾಕಬೇಕಿತ್ತು. ಕನ್ನಡ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿರೋದು ದುರಂತ. ರಮ್ಯಾ ಸಾಧನೆ ಮಾಡಿರೋದು ಕನ್ನಡ ಚಿತ್ರರಂಗದಲ್ಲಿ ಮತ್ತು ಕರ್ನಾಟಕದಲ್ಲಿ. ಕನ್ನಡ ಬಿಟ್ಟು ಅತಿಯಾದ ಇಂಗ್ಲಿಷ್ ಬಳಕೆ ಆಗಿದ್ದು ಯಾಕೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಇದೀಗ ರಮ್ಯಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.
View this post on Instagram
ಕಾರ್ಯಕ್ರಮದ ಹೆಸರೇ `ವೀಕೆಂಡ್ ವಿತ್ ರಮೇಶ್’ #Justsaying. ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಕನ್ನಡೇತರರು, ನಾನು ಎಲ್ಲರನ್ನು ಒಳಗೊಳ್ಳಲು ಪ್ರಯತ್ನಿಸುತ್ತಿದ್ದೆ ಅಷ್ಟೇ. ಮುಂದಿನ ಕಾರ್ಯಕ್ರಮ ಎಲ್ಲಾ ಮುದ್ದು ಅಜ್ಜಿಯಂದಿರಿಗಾಗಿ ಪೂರ್ತಿ ಕನ್ನಡದಲ್ಲೇ ಮಾತನಾಡುತ್ತೇನೆ. ನಾವೆಲ್ಲರೂ ಪ್ರೀತಿ ಮತ್ತು ದಯೆಯ ಭಾಷೆಯಲ್ಲಿ ಮಾತನಾಡೋಣ ಎಂದು ನಟಿ ರಮ್ಯಾ ಕಾಮೆಂಟ್ ಮಾಡಿದ್ದಾರೆ.
ಆದರೆ ರಮ್ಯಾ ನೀಡಿರುವ ಪ್ರತಿಕ್ರಿಯೆ ಅನೇಕರಿಗೆ ಇಷ್ಟವಾಗಿಲ್ಲ. ನೀವು ಕನ್ನಡ (Kannada) ಮಾತನಾಡುವವರೆಗೆ ಆ ಅಜ್ಜಿಂದಿರು ಇರಬೇಕಲ್ಲ ಎಂದು ನಟಿಗೆ ಟೀಕೆ ಮಾಡಿದ್ದಾರೆ.