ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಆಗಾಗ್ಗೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗಂತೂ ಈ ವಿಷಯ ಮತ್ತಷ್ಟು ಸದ್ದು ಮಾಡುತ್ತಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ರಕ್ಷಿತ್ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುತ್ತಿದ್ದಾರಂತೆ. ಹಾಗಾಗಿ ರಕ್ಷಿತ್ ಶೆಟ್ಟಿ ಅವರ ಎಲ್ಲ ಪ್ರಾಜೆಕ್ಟ್ ಗಳಿಗೂ ರಮ್ಯಾ ಹಾರೈಕೆಗಳನ್ನು ಸಲ್ಲಿಸುತ್ತಲೇ ಇದ್ದಾರೆ ಎನ್ನುವುದು ಹೊಸ ಸುದ್ದಿ.
ರಮ್ಯಾ ಅವರು ನಟಿಸುವಂತಹ ಕಥೆಗಳು ಸದ್ಯ ನನ್ನಲ್ಲಿ ಇಲ್ಲ. ನಾನು ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳಲ್ಲಿ ಅವರು ಇಲ್ಲ ಎಂದು ಈ ಹಿಂದೆ ರಕ್ಷಿತ್ ಶೆಟ್ಟಿ ಹೇಳಿದ್ದರೂ, ಅದು ಸುಳ್ಳು ಎನ್ನಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರು ಹೊಂಬಾಳೆ ಬ್ಯಾನರ್ ನಲ್ಲಿ ಮಾಡುವ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾರೂ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿಲ್ಲ. ಈ ಪ್ರಾಜೆಕ್ಟ್ ಶುರುವಾಗಲು ಇನ್ನೂ ಟೈಮ್ ಇದೆ. ಹಾಗಾಗಿ ಈ ವಿಷಯವನ್ನು ಬಹಿರಂಗಪಡಿಸುತ್ತಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಗ್ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ
ರಮ್ಯಾ ಅವರ ಜೊತೆ ನಟಿಸಲು ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಿತ್ ಈಗಾಗಲೇ ಹೇಳಿ ಆಗಿದೆ. ರಮ್ಯಾ ಅವರು ಕೂಡ ರಕ್ಷಿತ್ ಜೊತೆ ನಟಿಸಲು ರೆಡಿ ಇದ್ದಾರೆ. ಇಬ್ಬರ ಅಭಿಮಾನಿಗಳು ಕೂಡ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಆದಷ್ಟು ಬೇಗ ಈ ಕನಸು ಈಡೇರಲಿದೆ ಎನ್ನುವುದು ಮಾಹಿತಿ. ಈ ಸುದ್ದಿ ನಿಜವಾದರೆ, ಸ್ಯಾಂಡಲ್ ವುಡ್ ನಲ್ಲಿ ಮತ್ತೆ ರಮ್ಯಾ ಪರ್ವ ಶುರುವಾಗಲಿದೆ.