ಮೋದಿ ಪ್ರಧಾನಿಯಾಗಬೇಕೆಂದು ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆ – 14 ವರ್ಷದ ಕನಸು ಕೊನೆಗೂ ನನಸು

Public TV
2 Min Read
Rampal Kashyap and pm modi

ನವದೆಹಲಿ: ಮೋದಿ ಪ್ರಧಾನಿಯಾಗಬೇಕೆಂದು 14 ವರ್ಷಗಳ ಹಿಂದೆ ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆ ಮಾಡಿದ್ದ ರಾಂಪಾಲ್ ಕಶ್ಯಪ್ (Rampal Kashyap) ಇಂದು ಸ್ವತಃ ಮೋದಿ ಕೈಯಿಂದಲೇ ಹೊಸ ಶೂ ಹಾಕಿಸಿಕೊಳ್ಳುವ ಮೂಲಕ ತನ್ನ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇಂದು ಹರಿಯಾಣದ (Haryana) ಯಮುನಾ ನಗರದಲ್ಲಿ (Yamuna Nagara) ಉಷ್ಣವಿದ್ಯುತ್ ಸ್ಥಾವರದ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮೋದಿಯನ್ನು ರಾಂಪಾಲ್ ಅವರು ಭೇಟಿಯಾಗಿದ್ದು, 14 ವರ್ಷಗಳ ಪ್ರತಿಜ್ಞೆ ಪೂರ್ಣಗೊಂಡಿದೆ.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ – ಹಿಂದೂಗಳ ಮನೆಗೆ ಬೆಂಕಿ, ಯವತಿಯರಿಗೆ ಲೈಂಗಿಕ ಕಿರುಕುಳ

ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಯಮುನಾ ನಗರದಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ, ನಾನು ಕೈತಾಲ್‌ನ ಶ್ರೀ ರಾಂಪಾಲ್ ಕಶ್ಯಪ್ ಅವರನ್ನು ಭೇಟಿಯಾದೆ. ಅವರು 14 ವರ್ಷಗಳ ಹಿಂದೆ ನಾನು ಪ್ರಧಾನಿಯಾದ ನಂತರ ಹಾಗೂ ನನ್ನನ್ನು ಭೇಟಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ರಾಂಪಾಲ್ ಅವರಂತಹ ಜನರಿಂದ ನಾನು ವಿನಮ್ರ ಹಾಗೂ ಅವರ ಪ್ರೀತಿಗೆ ಸದಾ ಆಭಾರಿ ಎಂದು ಬರೆದುಕೊಂಡಿದ್ದಾರೆ.

ಮೋದಿ ಭೇಟಿ ವೇಳೆ ರಾಂಪಾಲ್ ಕಶ್ಯಪ್ ಅವರಿಗೆ ಹೊಸ ಶೂ ಕೊಡಿಸಿ, ಸ್ವತಃ ಪ್ರಧಾನಿಯೇ ಶೂ ಹಾಕಲು ಸಹಾಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಹರಿಯಾಣಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಹಿಸ್ಸಾರ್ ಮತ್ತು ಅಯೋಧ್ಯೆ ನಡುವಿನ ಮೊದಲ ವಾಣಿಜ್ಯ ವಿಮಾನಕ್ಕೆ ಹಸಿರು ನಿಶಾನೆ ಕೊಟ್ಟರು. ಹಿಸಾರ್ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಯಮುನಾನಗರದಲ್ಲಿ, ದೀನಬಂಧು ಚೋಟು ರಾಮ್ ವಿದ್ಯುತ್ ಸ್ಥಾವರದ ಸಾಮರ್ಥ್ಯವನ್ನು 800 ಮೆಗಾವ್ಯಾಟ್‌ಗೆ ಹೆಚ್ಚಿಸುವ ಶಿಲಾನ್ಯಾಸ ಮಾಡಿದರು.ಇದನ್ನೂ ಓದಿ: KGF 3 ಮೇಲಿನ ನಿಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಲ್ಲ- ಗುಡ್‌ ನ್ಯೂಸ್ ಕೊಟ್ಟ ಹೊಂಬಾಳೆ ಸಂಸ್ಥೆ

Share This Article